ಬೆಂಗಳೂರು: ಆಗಾಗ ದುಬೈಯಿಂದ ಬಂದು ಮದುವೆಯಾಗಿ ವಂಚಿಸುತ್ತಿದ್ದ ವ್ಯಕ್ತಿಯನ್ನು ಕೆಜಿ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅಮಾನುಲ್ಲಾಹ್ ಬಾಷಾ ಮತ್ತು ಆತನ ತಂದೆ ಬಾಷಾ ಹಾಗೂ ಝಕೀರ್ ಹುಸೇನ್ ಎಂಬುವರನ್ನು ಪೊಲೀಸರು ಬಂಧಿಸಿದ್ದು, ಫೇಸ್ ಬುಕ್ ಫೋಟೋ ಮೂಲಕ ಈತನ ಅಸಲಿಯತ್ತು ಹೊರಗೆ ಬಂದಿದೆ. ದುಬೈಯಲ್ಲಿ ಶಿಕ್ಷಕನಾಗಿರುವ ಈತ ವರದಕ್ಷಿಣೆಯ ಆಸೆಗಾಗಿ ಹೀಗೆ ಮದುವೆಯಾಗುತ್ತಿದ್ದ ಎನ್ನಲಾಗಿದೆ. ಈಗಾಗಲೇ ನಾಲ್ಕು ಬಾರಿ ಮದುವೆಯಾಗಿರುವ ಈತ ಐದನೇ ಮದುವೆ ತಯಾರಿಯಲ್ಲಿ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾನೆ.

ಇತ್ತೀಚಿಗೆ ಅಮಾನುಲ್ಲಾ ಕೆಜಿ ಹಳ್ಳಿ ನಿವಾಸಿಯೊಬ್ಬರ ಮಗಳನ್ನು ವಿವಾಹ ಆಗಿದ್ದು, ಆ ವಿವಾಹದ ಫೋಟೋ ಮನೆಯವರು ಫೇಸ್ಬುಕ್ ನಲ್ಲಿ ಹಾಕಿದ್ದರು. ಫೋಟೋ ನೋಡಿದ ಜನರು ಈ ವ್ಯಕ್ತಿಯ ಬಗ್ಗೆ ವಿವರವನ್ನು ಆ ಕುಟುಂಬಕ್ಕೆ ನೀಡಿದ್ದಾರೆ. ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Leave a Reply