ಇಂಟರ್ ನೆಟ್ ನಲ್ಲಿ ವಿವಿಧ ಮುಖಗಳನ್ನು ಮುಂದಿಟ್ಟು ಹ್ಯಾಕರ್ಸ್ ಗಳು ಕಾರ್ಯಾಚರಿಸುತ್ತಿರುತ್ತಾರೆ. ನೀವು ಫೇಸ್ಬುಕ್ ಮತ್ತು ಮೆಸ್ಸೆಂಜರ್ ಬಳಸುತ್ತೀರಾದರೆ ನಿಮಗೆ “this video is yours” ಎಂಬ ತಲೆ ಬರಹದಡಿ ನಿಮ್ಮ ಪ್ರೊಫೈಲ್ ಚಿತ್ರದೊಂದಿಗೆ ಲಿಂಕ್ ಕೆಲವೊಮ್ಮೆ ಬರುತ್ತದೆ. ಅದು ನನ್ನ ಸ್ನೇಹಿತ ಕಳುಹಿಸಿದ ಲಿಂಕ್ ಅಲ್ಲವೇ ಏನಾದರೂ ವಿಶೇಷತೆ ಇರಬಹುದು ಎಂದು ಕ್ಲಿಕ್ ಮಾಡಲು ಹೋಗದಿರಿ!

ನಿಜವಾಗಿ ಅದು ಹ್ಯಾಕರ್ಸ್ ಗಳು ವಿವಿಧ ಉದ್ದೇಶಗಳನ್ನು ಮುಂದಿಟ್ಟು ಕಳುಹಿಸುವ ವೈರಸ್ ಆಗಿರುತ್ತದೆ. ನಿಮ್ಮ ಪರಿಚಯಸ್ಥನ ಅಕೌಂಟ್ ಅದಾಗಲೇ ಹ್ಯಾಕ್ ಆಗಿರುತ್ತದೆ. ಆ ಅಕೌಂಟ್ ಮೂಲಕ ಹ್ಯಾಕರ್ಸ್ ಗಳು ನಿಮಗೆ ವೈರಸ್ ಲಿಂಕ್ ಕಳುಹಿಸಿ ನಿಮ್ಮ ಅಮೂಲ್ಯ್ ಮಾಹಿತಿಗಳನ್ನು ಡಾಟಗಳನ್ನು ಸಿಮ್, ನೆಟ್ ಬ್ಯಾಂಕಿಂಗ್ ಮಾಹಿತಿಗಳನ್ನು ಕಲೆ ಹಾಕುತ್ತಾರೆ ಎನ್ನಲಾಗುತ್ತದೆ. ಕೆಲವೊಮ್ಮೆ ಅವುಗಳು ನಿಮ್ಮ ಹೆಸರಿನಲ್ಲಿ ವಿವಿಧ ಜನರಿಗೆ ಅಶ್ಲೀಲ ವಿಡಿಯೋ ಕಳುಹಿಸುವ ಸಾಧ್ಯತೆ ಇದೆ.

ಆದ್ದರಿಂದ ನಿಮಗೆ ಸಂಬಂಧವಿಲ್ಲದ ಯಾವುದೇ ಇಂಥ ಲಿಂಕ್ ಗಳ ಗೊಡವೆಗೇ ಹೋಗದಿರುವುದು ಒಳಿತು. ಆದ್ದರಿಂದ ಈಗಾಗಲೇ ಫೇಸ್ಬುಕ್ ಸುರಕ್ಷತೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ಯಾವುದಕ್ಕೂ ಜಾಗರೂಕರಾಗಿರುವುದು ಒಳಿತು.

Leave a Reply