ನವದೆಹಲಿ: ಭೀಮ್ ಸೇನಾ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಭಾನುವಾರ ತಮ್ಮ ಹೊಸ ರಾಜಕೀಯ ಪಕ್ಷ “ಆಜಾದ್ ಸಮಾಜ ಪಕ್ಷ’ ವನ್ನು ಅಧಿಕೃತವಾಗಿ ಘೋಷಿಸಿದರು. ಈಗ ಅವರ ರಾಜಕೀಯ ಪಕ್ಷದ ಘೋಷಣೆಯಿಂದಾಗಿ ಉತ್ತರ ಪ್ರದೇಶದ 2022ರ ವಿಧಾನಸಭಾ ಚುನಾವಣೆ ಇನ್ನಷ್ಟು ಆಸಕ್ತಿದಾಯಕವಾಗಿದೆ. ಈಗಾಗಲೇ ಅಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಿಎಸ್ಪಿ ಅಖಾಡದಲ್ಲಿವೆ. ಆಜಾದ್ ಚಾಲನೆ ನೀಡಿದ ಪಕ್ಷಕ್ಕೆ ಎಸ್ ಪಿ, ಬಿಎಸ್ಪಿ, ಕಾಂಗ್ರೆಸ್ ಮತ್ತು ರಾಷ್ಟ್ರೀಯ ಲೋಕ ದಳದ 98 ನಾಯಕರು ಮೊದಲ ದಿನವೇ ಸೇರಿರುವುದು ವಿಶೇಷವಾಗಿದೆ.

ಇದೇ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಚಂದ್ರಶೇಖರ್ ಆಜಾದ್ ” ಸಾಹೇಬ್ ಕಾನ್ಶಿರಾಮ್ ನಿಮ್ಮ ಮಿಷನ್ ಅಪೂರ್ಣವಾಗಿದೆ, ಆಜಾದ್ ಸಮಾಜ ಪಕ್ಷವು ಅದನ್ನು ಪೂರ್ಣಗೊಳಿಸುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ.

Leave a Reply