ಮುಂಬೈ: ಬಾಲಿವುಡ್ ದಬಂಗ್ ಸ್ಟಾರ್ ಸಲ್ಮಾನ್ ಖಾನ್ ಬಿಗ್‍ಬಾಸ್ ಸೀಝನ್ 12ಕ್ಕಾಗಿ 300ಕೋಟಿ ರೂಪಾಯಿ ಪಡೆಯಲಿದ್ದಾರೆ. ಸಲ್ಮಾನ್ ಶೀಘ್ರದಲ್ಲಿ ಬಿಗ್ ಬಾಸ್ ಹನ್ನೆರಡರ ಜೊತೆ ಬರುತ್ತಿದ್ದಾರೆ.ಈ ಸಲ ಸಲ್ಮಾನ್ ವೀಕೆಂಡ್ ಎಪಿಸೋಡಿಗೆ 14 ಕೋಟಿ ರೂಪಾಯಿ ಪಡೆಯಲಿದ್ದಾರೆ.

ಬಿಗ್‍ಬಾಸ್ ಹನ್ನೊಂದರಲ್ಲಿ ಅವರ ಶುಲ್ಕ 12 ಕೋಟಿರೂಪಾಯಿ ಆಗಿತ್ತು.ಈ ಸಲ ಬಿಗ್ ಬಾಸ್ ಅಕ್ಟೋಬರ್‍ನಲ್ಲಲ್ಲ ಸೆಪ್ಟಂಬರ್‍ನಲ್ಲಿ ನಡೆಯುತ್ತಿದೆ. ಹೊಸವರ್ಷದ ಮೊದಲು ಡಿಸೆಂಬರ್‍ನಲ್ಲಿ ಅದು ಕೊನೆಗೊಳ್ಳಲಿದೆ. ಸಲ್ಮಾನ್‍ರಿಗೆ ಬಿಗ್‍ಬಾಸ್‍ನ ಇಡೀ ಸೀಝನ್‍ನಗೆ 300 ಕೂಟಿಗಿಂತಲೂ ಹೆಚ್ಚು ಆದಾಯ ಸಿಗಲಿದೆ.

ಶೋಗೆ ಟಿಆರ್‍ಪಿಯಲ್ಲಿ ಏನೇ ಸಂಭವಿಸಲಿ ಯಾವುದೇ ಪರಿಣಾಮ ಆಗಲಿ ಸಲ್ಮಾನ್‍ಗಂತೂ 300ಕೋಟಿ ರೂಪಾಯಿ ಮೊದಲೇ ಫಿಕ್ಸ್ ಆಗಿದೆ.

Leave a Reply