ಪಾಟ್ನಾ: ತರಬೇತಿ ವೇಳೆ ಶುಶ್ರೂಷಕಿಯ ಜೊತೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ವೈದ್ಯನಿಗೆ ಆಸ್ಪತ್ರೆಯ ನರ್ಸ್ ಗಳೆಲ್ಲ ಸೇರಿ ಚಪ್ಪಲಿ ಪೂಜೆ ಮಾಡಿದ ಘಟನೆ ಬಿಹಾರದ ಕಟ್ಟಿಹಾರ್ ನಲ್ಲಿ ನಡೆದಿದೆ.

ಸಹೋದ್ಯೋಗಿಯ ಮೇಲೆ ಕಿರುಕುಳ ನೀಡಿದ್ದಾನೆ ಎಂಬ ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಯ ದಾದಿಯರೆಲ್ಲ ಆಕ್ರೋಶ ವ್ಯಕ್ತ ಪಡಿಸಿ , ಸಿವಿಲ್ ಸರ್ಜನ್ ಕಚೇರಿಗೆ ತೆರಳಿ ವೈದ್ಯನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದು, ಆ ವೈದ್ಯನನ್ನು ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಪ್ರತಿಭಟನೆ ನಡೆಸಿದರು. ಆದರೆ ವೈದ್ಯಾಧಿಕಾರಿ ಅದಕ್ಕೆ ಒಪ್ಪದಿದ್ದಾಗ ಕಚೇರಿ ಒಳಗೆ ನುಗ್ಗಿದ ದಾದಿಯರು ಅಲ್ಲೇ ರಕ್ಷಣೆ ಪಡೆದಿದ್ದ ಆರೋಪಿ ಕಾಮುಕ ವೈದ್ಯನನ್ನು ಮನಬಂದಂತೆ ಥಳಿಸಿದ್ದಾರೆ.

ಈ ಘಟನೆ ಭಾರೀ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಮಾಡಿದೆ. ಬಿಹಾರದ ಮುಜಾಫರ ಪುರ ಬಾಲಿಕಾಶ್ರಮ ಮಾದರಿಯಲ್ಲೇ ಇದೂ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply