ಪಾಟ್ನಾ : ಭಾನುವಾರ ಬಿಹಾರದ ಕಟಿಹಾರ್ ನಲ್ಲಿ ನಡೆದ ಮುಸ್ಲಿಂ ಸಮಾವೇಶದಲ್ಲಿ ಬಿಹಾರದ ಇಂಧನ ಸಚಿವ ಬಿಜೇಂದ್ರ ಪ್ರಸಾದ್ ಟೋಪಿ ಧರಿಸಲು ನಿರಾಕರಿಸಿದ ವಿಡಿಯೋ ವೈರಲ್ ಆಗಿದೆ.

ಜೆಡಿಯು ಪಕ್ಷ ಕಾಟಿಹರ್ ನಲ್ಲಿ ತಾಲೀಮಿ ಬೇದಾರಿ (ಶೈಕ್ಷಣಿಕ ಜಾಗೃತಿ) ಸಮಾವೇಶದಲ್ಲಿ ಈ ಘಟನೆ ನಡೆದಿದ್ದು, ಆಯೋಜಕರೊಬ್ಬರು ಅವರಿಗೆ ಟೋಪಿ ಧರಿಸಲು ಮುಂದಾದಾಗ ಅವರು ಟೋಪಿ ಹಾಕಲು ನಿರಾಕರಿಸಿದ ವಿಡಿಯೋ ವನ್ನು ಎಎನ್ಐ ಸುದ್ದಿ ಸಂಸ್ಥೆ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದೆ. ಸಚಿವರ ಈ ನಡೆಗೆ ಅಲ್ಲಿದ್ದ ಕೆಲವರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

2011 ರಲ್ಲಿ ಸಾಧ್ಭವನ ವೃತದ ವೇಳೆ ಆಗ ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಟೋಪಿ ಧರಿಸಲು ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ತುಂಬಾ ಸೆಖೆಯಿದ್ದ ಕಾರಣ ಸಚಿವರು ಆಯೋಜಕರು ನೀಡಿದ ಟೋಪಿ ಧರಿಸಲು ನಿರಾಕರಿಸಿದ್ದಾರೆಯೇ ವಿನಃ ಬೇರೆ ಯಾವುದೇ ಕಾರಣಗಳಿಲ್ಲ ಎಂದು ಜೆಡಿಯು ಪಕ್ಷದ ಎಂಎಲ್ಸಿ ತನ್ವಿರ್ ಅಕ್ತರ್ ಸಮರ್ಥಿಸಿದ್ದಾರೆ.

Leave a Reply