ಹೈದರಾಬಾದ್: ನಗರದ ಕೆಲ ಭಾಗಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ಒದಗಿಸಲಾಗುತ್ತಿದ್ದು ಆದರೆ ಮಹಿಳಾ ಪ್ರಯಾಣಿಕರಿಗೆ ಆತಿಥ್ಯ ವಹಿಸಲು ಬೈಕ್ ಟ್ಯಾಕ್ಸಿ ಚಾಲಕರು ಹೆದರುತ್ತಿದ್ದಾರೆ ಎಂಬ ವಿಷಯ ಇದೀಗ ಬಹಿರಂಗಗೊಂಡಿದೆ.
ದೇಶದಲ್ಲಿ ಬೈಕ್ ಟ್ಯಾಕ್ಸಿ ನಡೆಸಲು ವಾಣಿಜ್ಯ ಪರವಾನಗಿ ಪಡೆದ ಕೆಲ ನಗರಗಳಲ್ಲಿ ಹೈದರಾಬಾದ್ ಸಹ ಒಂದಾಗಿದೆ. 2017ರಲ್ಲಿ ಹೈದರಾಬಾದ್ ನಲ್ಲಿ ಬೈಕ್ ಟ್ಯಾಕ್ಸಿ ಸೇವೆ ಒದಗಿಸಲಾಗಿದ್ದು ವಿಶೇಷವಾಗಿ ಯುವತಿಯರು ಹೆಚ್ಚಾಗಿ ಪ್ರಯಾಣಿಸುತ್ತಿದ್ದಾರೆ.
ಇನ್ನು ಬೈಕ್ ಟ್ಯಾಕ್ಸಿ ನಡೆಸುತ್ತಿರುವ 21 ವರ್ಷದ ಸಾಯಿ ಕಿರಣ್ ಎಂಬುವರನ್ನು ಪ್ರಶ್ನಿಸಿದಾಗ ಅವರು, ಮಹಿಳಾ ಪ್ರಯಾಣಿಕರನ್ನು ಬೈಕ್ ನಲ್ಲಿ ಕೂರಿಸಿಕೊಂಡಾಗ ಸ್ವಲ್ಪ ಹೆದರಿಕೆಯಾಗುತ್ತದೆ. ರಸ್ತೆ ಮಧ್ಯೆ ಗುಂಡಿಗಳು ಹಾಗೂ ಸ್ಪೀಡ್ ಬ್ರೇಕರ್ ಬಂದಾಗ ಬೈಕ್ ನಿಯಂತ್ರಣ ತಪ್ಪಿದಾಗ ಆಕೆ ತಪ್ಪಾಗಿ ಭಾವಿಸಿ ಎಲ್ಲಿ ಕಡಿಮೆ ರೇಟಿಂಗ್ ಅಥವಾ ದೂರು ಕೊಡುತ್ತಾರೋ ಎಂಬ ಹೆದರಿಕೆಯಾಗುತ್ತದೆ ಎಂದರು.
ಮತ್ತೊಬ್ಬರು ಬೈಕ್ ಟ್ಯಾಕ್ಸಿ ನಡೆಸುತ್ತಿರುವ ಕುಮಾರ್ ಎಂಬುವರು, ಹೆಚ್ಚುವರಿ ಹಣ ಸಂಪಾದಿಸುವ ಸಲುವಾಗಿ ನಾನು ಬೈಕ್ ಟ್ಯಾಕ್ಸಿ ನಡೆಸುತ್ತಿದ್ದೇನೆ. ಮೊದಲಿಗೆ ಉತ್ತಮವಾಗಿ ಬೈಕ್ ಟ್ಯಾಕ್ಸಿ ಸೇವೆ ಇದೀಗ ಕಡಿಮೆಯಾಗುತ್ತಿದೆ. ಆದರೂ ನಾವು ಗಳಿಸುತ್ತಿರುವ ಹಣ ಕ್ಯಾಬ್ ಚಾಲಕರಿಗಿಂತ ಉತ್ತಮವಾಗಿದೆ ಎಂದರು.
ನಾನಾ ನಾಚಿಕೆ ಸ್ವಭಾವದವನು. ಇದಕ್ಕೂ ಮೊದಲು ನಾನು ನನ್ನ ಹೆಂಡತಿ ಹೊರತು, ಯಾರನ್ನು ಬೈಕ್ ಮೇಲೆ ಕೂರಿಸಿಕೊಂಡು ಹೋಗಿರಲಿಲ್ಲ. ಆದರೆ ಬೈಕ್ ಟ್ಯಾಕ್ಸಿ ನಡೆಸಲು ಆರಂಭಿಸಿದ ಮೇಲೆ ಬೈಕ್ ನಲ್ಲಿ ಬೇರೆ ಮಹಿಳಾ ಪ್ರಯಾಣಿಕರನ್ನು ಕೂರಿಸಿಕೊಂಡು ಹೋಗುತ್ತಿದ್ದೇನೆ. ಮಹಿಳಾ ಪ್ರಯಾಣಿಕರನ್ನು ಕೂರಿಸಿಕೊಂಡು ಹೋಗುವಾಗ ನಾನು ಹೆಚ್ಚು ಜಾಗರೂಕತೆಯಿಂದ ಬೈಕ್ ಓಡಿಸುತ್ತೇನೆ. ಹೆಚ್ಚು ವೇಗವಾಗಿ ಹೋಗುವುದಿಲ್ಲ. ಜತೆಗೆ ಬ್ರೇಕ್ ಹಾಕುವಾಗಲು ನಿಧಾನವಾಗಿ ಹಾಕುತ್ತೇನೆ ಎಂದು ಹೇಳಿದರು.

ಕ್ರಪೆ : ಕನ್ನಡ ಪ್ರಭ

Leave a Reply