ಅಮೆರಿಕ: ಅತ್ಯಾಚಾರ ಪ್ರಕರಣವೊಂದರಲ್ಲಿ ಅಮೆರಿಕನ್ ಹಾಸ್ಯ ನಟ ಬಿಲ್‍ಕೊಸ್ಬಿಗೆ ಹತ್ತು ವಷ್ ಜೈಲು ಶಿಕ್ಷೆ ನೀಡಲಾಗಿದೆ. ಬಾಸ್ಕಟ್‍ಬಾಲ್ ಮಾಜಿ ತಾರೆ ಆಂಡ್ರಿಯಾ ಕಾನ್ಸ್ಟಂಟ್‍ಗೆ 2004ರಲ್ಲಿ ಮಾದಕವಸ್ತು ನೀಡಿ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಕೋರ್ಟು ಎಂಬತ್ತು ವರ್ಷದ ಕೊಸ್ಬಿಗೆ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪಿತ್ತಿದೆ.
ಮೀಟು ಅಭಿಯಾನ ಆರಂಭಿಸಿದ ಬಳಿಕ ಲೈಂಗಿಕ ಅತ್ಯಾಚಾರದಲ್ಲಿ ಶಿಕ್ಷೆಗೊಳಗಾದ ಪ್ರಥಮ ಸಿಲೆಬ್ರಿಟಿ ಕೋಸ್ಬಿಯಾಗಲಿದ್ದಾರೆ. ಫಿಲಿಡೆಲ್ಪಿಯದ ಮನೆಯಲ್ಲಿ ಕೊಸ್ಬಿಯವರನ್ನು ಭೇಟಿಯಾಗಲು ಆಂಡ್ರಿಯಾ ಬಂದಿದ್ದರು. ಆಗ ಘಟನೆ ನಡೆದಿತ್ತು. ಆಂಡ್ರಿಯಾಗೆ ವೈನ್‍ನಲ್ಲ ಮಾದಕ ವಸ್ತು ಬೆರಸಿ ಕೊಟ್ಟಿದ್ದೇನೆ ಎಂದು ಕೋರ್ಟಿನಲ್ಲಿ ಕೊಸ್ಬಿ ಒಪ್ಪಿಕೊಂಡಿದ್ದರು.
ಜೈಲು ಶಿಕ್ಷೆಯಲ್ಲದೆ 25,000 ಡಾಲರ್ದಂಡವನ್ನು ಕೂಡ ಮೊನ್ಸೆಗಾಮರಿ ಕೌಂಟಿ ಕೋರ್ಟಿನ ನ್ಯಾಯಾಧೀಶ ಸ್ಟೀವ್ ಒನಿಯಲ್ ತೀರ್ಪಿನಲ್ಲಿ ಪ್ರಕಟಿಸಿದ್ದಾರೆ.
ಇದಲ್ಲದೆ ಪ್ರಾಸಿಕ್ಯೂಶನ್ ಖರ್ಚನ್ನು ಕೂಡ ಕೊಸ್ಬಿ ಭರಿಸಬೇಕಾಗಿದೆ. ಕೊಸ್ಬಿಯನ್ನು ಪ್ರತಿತಿಂಗಳು ಕೌನಸಿಲಿಂಗ್‍ಗೆ ಒಳಪಡಿಸಬೇಕು ಮತ್ತು ಲೈಂಗಿಕ ಅಪರಾಧಿಯಾಗಿ ನೋಂದಾಯಿಸಿಕೊಳ್ಳಬೇಕು. ಕೊಸ್ಬಿಯ ವಕೀಲರು ತೀರ್ಪಿನ ವಿರುದ್ಧ ಮೇಲ್ಮನವಿಗೆ ನಿರ್ಧರಿಸಿದ್ದಾರೆ.
ಕೊಸ್ಬಿಯ ವಿರುದ್ಧ 50ಕ್ಕೂ ಹೆಚ್ಚು ಮಹಿಳೆಯರು ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದಾರೆ. ಹೆಚ್ಚಿನ ಪ್ರಕರಣದಲ್ಲಿ ಈತನ ಆರೋಪ ಸಾಬೀತಾಗಿದೆ. ಕೋಸ್ಬಿಯ ಕುರುಡತನವನ್ನುಮುಂದಿಟ್ಟು ಅವರನ್ನು ಗೃಹ ಬಂಧನದಲ್ಲಿರಿಸಲು ಕೋರಿಕೆ ಸಲ್ಲಿಸಿದ್ದರು. ಪೆನ್ಸಿಲ್‍ವಾನಿಯದ ಜೈಲಿನಲ್ಲಿ 80 ವಯಸ್ಸಿನ 86 ಕೈದಿಗಳಿದ್ದು ಕೊಸ್ಬಿ ಇವರಲ್ಲೊಬ್ಬರಾಗಲಿದ್ದಾರೆ ಎಂದು ವರದಿ ತಿಳಿಸಿದೆ.