ಬಿಸಿಬೇಳೆಬಾತ್ ಪುಡಿ ಮಾಡಲು ಬೇಕಾಗುವ ಸಾಮಗ್ರಿಗಳು

ಕಡಲೆಕಾಳು- 1 ಟೀಚಮಚ
ಉದ್ದಿನಬೇಳೆ- 1 ಟೀಚಮಚ
ಧನಿಯ- 1/2 ಚಮಚ
ಜೀರಿಗೆ- 1 ಚಮಚ
ಮೆಣಸು- 5
ಒಣ ಮೆಣಸಿನಕಾಯಿ- 2
ಗಸಗಸೆ- 1 ಟೀಚಮಚ
ಒಣಕೊಬ್ಬರಿ- 1 ಟೀಚಮಚ
ಅಕ್ಕಿ- 1/2 ಟೀ ಚಮಚ
ಅರಿಶಿಣ- 1/4 ಟೀ ಚಮಚ
ಸಾಸಿವೆ- 1/2 ಟೀಚಮಚ
ದಾಲ್ಚಿನ್ನಿ- 1
ಏಲಕ್ಕಿ- 1
ಲವಂಗ-1
ಮೆಂತ್ಯೆ- ಸ್ವಲ್ಪ
ಕರಿಬೇವು- ಸ್ವಲ್ಪ
ಇಂಗು- 1/4 ಟೀಚಮಚ

ಮೇಲೆ ತಿಳಿಸಿರುವ ಎಲ್ಲಾ ಸಮಾಗ್ರಿಗಳನ್ನು ಬೇರೆ ಬೇರೆಯಾಗಿ ಹುರಿದುಕೊಂಡು ತಣ್ಣಗಾದ ಬಳಿಕ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಟ್ಟುಕೊಳ್ಳಿ. ಗಾಳಿಯಾಡದ ಡಬ್ಬಿಯಲ್ಲಿ ಹಾಕಿಡಿ. ಬಿಸಿಬೇಳೆಬಾತ್ ತಯಾರಿಸುವಾಗ ಬೇಳೆ ಮತ್ತು ಅಕ್ಕಿಯನ್ನು ಬೇಯಿಸಿಕೊಂಡು, ಈ ಪುಡಿಯನ್ನು ಉಪಯೋಗಿಸಿ

LEAVE A REPLY

Please enter your comment!
Please enter your name here