ಭಾರತೀಯ ಜನತಾ ಪಕ್ಷ ಯಾವತ್ತಿಗೂ ಅಟಲ್ ಬಿಹಾರಿ ವಾಜಪೇಯಿ ಮತ್ತು ಅಡ್ವಾಣಿಯವರದ್ದಾಗಿರಲಿಲ್ಲ ಮತ್ತು ಈಗ ನರೇಂದ್ರ ಮೋದಿ ಮತ್ತು ಅಮಿತ್ ಶಾರದ್ದು ಆಗುವುದೂ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ನಾಯಕ ನಿತಿನ್ ಗಡ್ಕರಿ ಹೇಳಿದರು.
ಬಿಜೆಪಿ ನಾಯಕ ಮತ್ತು ಕೇಂದ್ರ ಮಂತ್ರಿ ಗಡ್ಕರಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಈ ಅಭಿಪ್ರಾಯ ತಿಳಿಸಿದ್ದು, ಬಿಜೆಪಿ ವ್ಯಕ್ತಿ ಕೇಂದ್ರಿತ ಪಕ್ಷ ಅಲ್ಲ, ಬಿಜೆಪಿ ಪಕ್ಷ ವ್ಯಕ್ತಿ ಕೇಂದ್ರಿತ ಪಕ್ಷ ಆಗುವುದೂ ಇಲ್ಲ ಎಂದರು.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾ ಎಂದರೆ ಇಂಡಿಯಾ- ಇಂಡಿಯಾ ಎಂದರೆ ಇಂದಿರಾ ಆದಂತೆ ಮೋದಿ ಎಂದರೆ ಬಿಜೆಪಿ ಬಿಜೆಪಿ ಅಂದರೆ ಮೋದಿ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಬಿಜೆಪಿಯು ಸಿದ್ಧಾಂತ ಕೇಂದ್ರಿತ ಪಕ್ಷವಾಗಿದೆ. ಆ ಪಕ್ಷವನ್ನು ಮೋದಿಯ ಪಕ್ಷ ಎಂದು ಹೇಳುವುದು ತಪ್ಪು. ಅದೇ ಸಮಯದಲ್ಲಿ ಬಿಜೆಪಿ ಪಕ್ಷ ಮತ್ತು ಪ್ರಧಾನಿಯು ಒಂದಕ್ಕೊಂದು ಪೂರಕವಾಗಿರುತ್ತದೆ. ಪಕ್ಷದ ಸಂಸದೀಯ ಮಂಡಳಿಯೇ ಎಲ್ಲಾ ನಿರ್ಣಯಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

 

Leave a Reply