ಲಕ್ನೊ: ಇತ್ತೀಚೆಗೆ ಉತ್ತರಪ್ರದೇಶ- ದಿಲ್ಲಿಯ ಗಡಿಯಲ್ಲಿ ರೈತ ಹೋರಾಟದ ಮೇಲೆ ಪೊಲೀಸರು ನಡೆಸಿದ್ದ ಕ್ರೂರ ಲಾಠಿ ಚಾರ್ಜಿನ ಕುರಿತು ತೀವ್ರ ವಿರೋಧ ಉತ್ತರಪ್ರದೇಶದ ಗ್ರಾಮಗಳಲ್ಲಿ ಈಗಲೂ ಹೊಗೆಯಾಡುತ್ತಿದೆ. ವಯೋವೃದ್ಧ ರೈತರಿಗೂ ಹೊಡೆದು ವಿವಶಗೊಳಿಸಿದ ಸರಕಾರದ ಕ್ರಮವೀಗ ಬಿಜೆಪಿ ವಿರೋಧಿ ಅಲೆಯಾಗಿ ಗ್ರಾಮಗಳಲ್ಲಿ ಪ್ರಚಾರಗೊಳ್ಳುತ್ತಿದೆ.

ಉತ್ತರ ಪ್ರದೇಶದ ರೋಸುಲ್‍ಪುರ್ ಮಾಫಿ ಗ್ರಾಮಸ್ತರು” ಬಿಜೆಪಿಗೆ ಇಲ್ಲಿಗೆ ಪ್ರವೇಶವಿಲ್ಲ: ಬಿಜೆಪಿಯವರು ಪ್ರವೇಶಿಸುವುದಾರೆ ಅವರೇ ಸ್ವರಕ್ಷಣೆ ಮಾಡಿಕೊಳ್ಳಬೇಕು” ಎಂದು ಪೋಸ್ಟರ್ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ರೈತ ಒಗ್ಗಟ್ಟಿಗೆ ಜಯವಾಗಲಿ. ಬಿಜೆಪಿ ಕಾರ್ಯಕರ್ತರು ಈ ಗ್ರಾಮವನ್ನು ಪ್ರವೇಶಿಸಬಾರದು. ನಿಮ್ಮ ಸುರಕ್ಷೆಯ ಹೊಣೆ ನೀವೇ ಮಾಡಿಕೊಳ್ಳಿರಿ. ರೈತರ ಒಗ್ಗಟ್ಟಿಗೆ ಜಯವಾಗಲಿ’ ಎಂದು ರೊಸುಲ್‍ಪುರ್ ಮಾಫಿ ಗ್ರಾಮದ ರೈತರ ಪೋಸ್ಟರ್‍ನಲ್ಲಿ ಬರೆಯಲಾಗಿದೆ. ಇದು ಈಗ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ತೆರನಾಗಿ ಪ್ರಚಾರಗೊಳ್ಳುತ್ತಿದೆ.

ರೋಸುಲ್‍ಪುರ್ ಮಾಫಿ ಗ್ರಾಮದ ಸಮೀಪದ ಗ್ರಾಮದ ಜನರು ಕೂಡ ಬಿಜೆಪಿಗೆ ನಿಷೇಧ ಹೇರಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದೇವೇಳೆ ಶಿವಸೇನೆಯನಾಯಕ ಮೋಹನ್ ಗುಪ್ತ ರೈತ ಹೋರಾಟದ ವಿರುದ್ಧ ಕೇಂದ್ರ ಸರಕಾರ ತೋರಿಸಿ ಕ್ರೌರ್ಯಕ್ಕೆ ಜನರು ಈ ರೀತಿ ಪ್ರತಿಕ್ರಿಯಿಸಿರುವುದರಲ್ಲಿ ಸಂತೋಷವಿದೆ ಎಂದು ಹೇಳಿದ್ದಾರೆ. ತನ್ನ ಗ್ರಾಮದಲ್ಲಿ ಇಂತಹದೇ ಬೋರ್ಡು ಹಾಕಿ ತಾನು ಈ ಹೋರಾಟದಲ್ಲಿ ಸೇರುತ್ತೇನೆ ಎಂದು ಅವರು ಹೇಳಿದರು.

ಈ ಹಿಂದೆ ಎಸ್‍ಸಿ, ಎಸ್‍ಟಿ ಕಾಯಿದೆಯ ವಿರುದ್ಧ ನಡೆದ ಹೋರಾಟದ ವೇಳೆ ಉತ್ತರಪ್ರದೇಶದ ಬಾರಬಂಕಿ ಜಿಲ್ಲೆಯಲ್ಲಿ ಉನ್ನತ ಜಾತಿಯವರು ಬಿಜೆಪಿ ವಿರುದ್ಧ ಇಂತಹದ್ದೇ ಪೊಸ್ಟರ್ ಹಾಕಿದ್ದರು.

Leave a Reply