ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಮಂತ್ರಿ ಮಂಡಲದ ಸಚಿವ ಪದ್ಮ ಶುಕ್ಲ ಬಿಜೆಪಿ ತೊರೆದಿರುವುದಾಗಿ ವರದಿಯಾಗಿದೆ. ಕಾಂಗ್ರೆಸ್ ಸೇರುವುದಾಗಿ ಎ.ಬಿ.ಸಿ ನ್ಯೂಸ್ ವರದಿ ಮಾಡಿದೆ.

ಮಧ್ಯ ಪ್ರದೇಶದ ಪಬ್ಲಿಕ್ ವೆಲ್ಫೇರ್ ಮುಖ್ಯಸ್ಥೆಯಾಗಿದ್ದ ಪದ್ಮ ಶುಕ್ಲ ಕಾಂಗ್ರೇಸ್ ಸೇರುವ ಸಲುವಾಗಿ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ರೊಂದಿಗೆ ಭೇಟಿಯಾಗಿ ಪಕ್ಷದ ಸದಸ್ಯತ್ವ ಸ್ವೀಕರಿಸಿರುವೂದಾಗಿಯೂ ವರದಿಯಾಗಿದೆ. ಅವರು ಬಿಜೆಪಿ ತೊರೆಯುವ ಕುರಿತ ಕಾರಣಗಳು ಲಭ್ಯವಾಗಿಲ್ಲ.

ಮದ್ಯಪ್ರಧೇಶ ಆಡಳಿತಾರೂಢ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆಯಿದ್ದು ಹದಿನೈದು ವರ್ಷಗಳ ಬಳಕ ಕಾಂಗ್ರೆಸ್ ಮರಳಿ ಅಧಿಕಾರಕ್ಕೇರಲಿದೆಯೆಂದು ಸಮೀಕ್ಷಾ ವರದಿಗಳು ತಿಳಿಸಿತ್ತು. ಚುನಾವಣೆಗೆ ಇನ್ನೆರಡು ತಿಂಗಳು ಬಾಕಿಯಿರುವಾಗ ಇಂತಹದ್ದೊಂದು ಬೆಳವಣಿಗೆ ಬಿಜೆಪಿ ಪಾಳಯದಲ್ಲಿ ಆತಂಕ ಮೂಡಿಸಿದೆ.

Leave a Reply