ಬೆಂಗಳೂರು: ಬಿಜೆಪಿಗೂ ರಿವರ್ಸ್ ಆಪರೇಷನ್ ಭಯ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮಲ್ಲಿದ್ದ ಅತೃಪ್ತ ಶಾಸಕರು ಈಗಾಗಲೇ ಮುಂಬೈಗೆ ಹೋಗಿದ್ದಾರೆ. ಬಿಜೆಪಿಯಲ್ಲೂ ಅತೃಪ್ತದ್ದು, ಯಾವಾಗ ರಿವರ್ಸ್ ಆಪರೇಷನ್‌ಗೆ ಒಳಗಾಗುತ್ತಾರೋ ಎಂಬ ಭಯ ಬಿ.ಎಸ್. ಯಡಿಯೂರಪ್ಪನವರಿಗೂ ಇದೆ ಎಂದು ಹೇಳಿದರು.

ನಾನು ಯಾವಾಗಲೂ ಖುಷಿಯಾಗಿ ಇರ್ತೀನಿ. ಜನಸೇವೆ ಮಾಡೋಕೆ ಯಾರೂ ನನ್ನ ಕರೆದಿಲ್ಲ. ನಾನೇ ಬಂದಿರೋದು. ಅಳುತ್ತಾ ಜನಸೇವೆ ಮಾಡಬಾರದು. ಯಾವಾಗಲೂ ಖುಷಿಯಲ್ಲಿ ಆಡಳಿತ ನಡೆಸಬೇಕಲ್ಲವೇ ಎಂದು ಪ್ರಶ್ನಿಸಿದ ಅವರು, ನನಗೆ ಯಾವುದೇ ಆಪರೇಷನ್‌ನಲ್ಲಿ ನಂಬಿಕೆ ಇಲ್ಲ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ವಿಶ್ವಾಸಮತಯಾಚನೆ ನಿರ್ಧಾರ ಪ್ರಕಟಿಸಿದ್ದಾರೆ.

ನಾನು ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಏನು ಮಾತಾಡೋಲ್ಲ. ರಾಜೀನಾಮೆ ಸ್ವೀಕರಿಸೋದು ಯಾರು? ಶಾಸಕರ ಅನರ್ಹಗೊಳಿಸೋರು ಯಾರು ಸ್ಪೀಕರ್ ತಾನೇ ನನಗೆ ಗೊತ್ತಿರೋದು ಅಷ್ಟೆ ಎಂದರು.ರಾಜಕಾರಣ ಇರೋದು ಜನ ಸೇವೆ ಮಾಡಲು. ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಾಗುತ್ತಾ? ಎಂದು ಹೇಗೆ ಹೇಳಲು ಸಾಧ್ಯ. ನಾವು ಈ ಬಗ್ಗೆ ಚರ್ಚೆ ಮಾಡಿದ ಬಳಿಕವೇ ಈ ತೀರ್ಮಾನ ಮಾಡಲಾಗಿದೆ. ರೋಷನ್ ಬೇಗ್ ಅವರನ್ನು ಅಮಾನತು ಮಾಡಲಾಗಿದೆ. ರಾಮಲಿಂಗಾ ಜತೆ ಮಾತುಕತೆ ನಡೆಸಲಾಗುತ್ತಿದೆ. ಎಂದರು.

LEAVE A REPLY

Please enter your comment!
Please enter your name here