ಕಾನ್ಪುರ ( ಉತ್ತರ ಪ್ರದೇಶ): ದೀಪಾವಳಿಯ ರಾತ್ರಿ ಆರು ವರ್ಷದ ದಲಿತ ಬಾಲಕಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ : ಕಾನ್ಪುರ ಜಿಲ್ಲೆಯ ಘಟಂಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅಂಕುಲ್ (20) ಮತ್ತು ಬಿರಾನ್ (31) ಎಂಬ ವ್ಯಕ್ತಿಗಳು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ನಂತರ ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬ್ರಿಜೇಶ್ ಶ್ರೀವಾಸ್ತವ ಸೋಮವಾರ ತಿಳಿಸಿದ್ದಾರೆ. .

ಬಾಲಕಿಯ ಅತ್ಯಾಚಾರ ಮಾಡಿ ಕೊಲೆಗೈದ ಬಳಿಕ ಆಕೆಯ ಲಿವರನ್ನು ತೆಗೆದು ಮುಖ್ಯ ಆರೋಪಿ ಪುರುಷೋತ್ತಂಗೆ ಕೊಟ್ಟಿದ್ದಾರೆ. ಪರುಷೋತ್ತಮ್ ಮತ್ತು ಆತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಪತ್ನಿ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.

ಪುರುಷೋತ್ತಮ್ ನಿಗೆ 1999 ರಲ್ಲಿ ಮದುವೆಯಾಗಿದ್ದು, ಇಲ್ಲಿಯವರಿಗೆ ಮಕ್ಕಳಾಗಿರಲಿಲ್ಲ. ಮಾಟ ಮಂತ್ರದ ಮೂಲಕ ಮಕ್ಕಳನ್ನು ಗಳಿಸಲು ಪ್ರಯತ್ನದಲ್ಲಿ ತನಗೆ ಮಗುವಿನ ಶ್ವಾಸಕೋಶ ಅಗತ್ಯ ಇತ್ತು ಅದಕ್ಕಾಗಿ ಹೆಣ್ಣು ಮಗುವನ್ನು ಅಪಹರಿಸಲು ಸೂಚಿಸಿದ್ದೆ ಎಂದು ಪೋಲೀಸರ ತನಿಖೆಯಲ್ಲಿ ತಿಳಿದು ಬಂದಿದೆ. ಘಟಂಪೂರ್ ಕೊಟ್ವಾಲಿ ಪ್ರದೇಶದ ಹಳ್ಳಿಯೊಂದರಲ್ಲಿ ವಾಸಿಸುತ್ತಿರುವ ಕುಟುಂಬವು ಶನಿವಾರ ದೀಪಾವಳಿಯನ್ನು ಪೂಜೆಯ ತಯಾರಿ ನಡೆಸುತ್ತಿರುವಾಗ ಅವರ ಆರು ವರ್ಷದ ಮಗು ಇದ್ದಕ್ಕಿದ್ದಂತೆ ಕಾಣೆಯಾಗಿದೆ ಎಂದು ಉಪ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಡಾ.ಪ್ರೀತಿಂದರ್ ಸಿಂಗ್ ತಿಳಿಸಿದ್ದಾರೆ. ಬಳಿಕ ಹುಡುಕಾಟ ನಡೆಸಿದಾಗ ದೇವಾಲಯದ ಸಮೀಪ ಗ್ರಾಮಸ್ಥರು ಮಗುವಿನ ಶವವನ್ನು ನೋಡಿದ್ದಾರೆ ಎಂದು ಅವರು ಹೇಳಿದರು.

Leave a Reply