ಶ್ರೀನಗರ:  ನಮ್ಮ ಯೋಧರು ಯಾವ ಸಂದರ್ಭದಲ್ಲಾದರೂ ಜನರನ್ನು ರಕ್ಷಿಸಲು ಧುಮುಕುತ್ತಾರೆ. ಗಡಿ ಕಾಪಾಡುವುದರ ಮೂಲಕ ಅಥವಾ ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಅಪಾಯವನ್ನು ಎದುರಿಸಿ ಜನರನ್ನು ರಕ್ಷಿಸುತ್ತಾರೆ.  ಗರ್ಭಿಣಿ ಮಹಿಳೆಗೆ ರಕ್ತದ ಅವಶ್ಯಕತೆ ಇದ್ದು ಸಿಆರ್​​ಪಿಎಫ್​​ ಯೋಧರೊಬ್ಬರು ರಕ್ತದಾನ ಮಾಡುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. 53ನೇ ಬೆಟಾಲಿಯನ್​​​ನ ಕಾನ್ಸ್​​ಟೇಬಲ್​​ ಗೋಹಿಲ್​​ ಶೈಲೇಶ್​​, ಗರ್ಭಿಣಿಯೊಬ್ಬರಿಗೆ ರಕ್ತದಾನ ಮಾಡಿದ ಪೋಟೊ ಇದೀಗ ವೈರಲ್ ಆಗಿದೆ.

ಗುಲ್ಶನ್​​ ಮೂಲದ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ ಬಳಿಕ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಕೂಡಲೇ ಅವರಿಗೆ ರಕ್ತ ಹಾಕಬೇಕಿತ್ತು. ಹೀಗಾಗಿ ಮಹಿಳೆಯ ಕುಟುಂಬಸ್ಥರು ಪ್ಯಾರಾಮಿಲಿಟರಿ ಫೋರ್ಸ್​​ನ ಭಾಗವಾದ ಸಿಆರ್​​ಪಿಎಫ್​​  ಗೆ ಕರೆ ಮಾಡಿದ್ದರು. ಈ ವೇಳೆ ಕಾನ್ಸ್​​ಟೇಬಲ್ ಶೈಲೇಶ್​​ ಮಹಿಳೆಗೆ ರಕ್ತದಾನ ಮಾಡಿದ್ದಾರೆ. ಸದ್ಯ ತಾಯಿ ಮಗು ಆರೋಗ್ಯವಾಗಿದ್ದಾರೆ.

Leave a Reply