ಇಂಡೋನೇಷ್ಯಾದ ಬಾಲಿವುಡ್ ಚಿತ್ರಗಳ ಅಭಿಮಾನಿಗಳು ಇತ್ತೀಚೆಗೆ ಹಳೆಯ ಬಾಲಿವುಡ್ ನ ಎವರ್ ಗ್ರೀನ್ ಹಿಟ್ ಹಾಡುಗಳ ವಿಡಿಯೋಗಳನ್ನು ಮರುಸೃಷ್ಟಿ ಮಾಡುವುದು ಹೆಚ್ಚಲಾಗುತ್ತಿದೆ. ಇಂತಹ ಹಲವು ಮರುಸೃಷ್ಟಿಗಳನ್ನು ಇದೀಗ ಯೂಟ್ಯೂಬ್ ನಲ್ಲಿ ಕಾಣಬಹುದು. ಅವುಗಳಲ್ಲಿ ಕೆಲವು ವಿಡಿಯೋಗಳನ್ನು ಮೂಲ ವಿಡಿಯೋದೊಂದಿಗೆ ಅತಿ ನಿಕಟ ಸಾಮಿಪ್ಯ ದಂತೆ ಚಿತ್ರೀಕರಿಸಲಾಗಿದೆ. ಕಳೆದ ವಾರ ವಿನಾ ಪ್ಯಾನ್ ಎಂಬಾಕೆಯ ಯುಟ್ಯೂಬ್ ಚಾನಲ್ ನಲ್ಲಿ ಅಪ್ಲೋಡ್ ಮಾಡಲಾಗಿರುವ ಸ್ಟಾರ್ ನಿರ್ದೇಶಕ ಕರಣ್ ಜೋಹರ್ ಅವರ ಚಲನಚಿತ್ರ ಕಭಿ ಖುಷಿ ಕಭಿ ಘಮ್‌ನ ‘ಬೋಲೆ ಚುಡಿಯಾ’ ಹಾದಿನ ಮರುಸೃಷ್ಟಿ ವಿಡಿಯೋ ಯೂಟ್ಯೂಬ್ ನಲ್ಲಿ ಸಿಕ್ಕಾಬಟ್ಟೆ ವೈರಲ್ ಆಗಿದೆ.

ವೀಡಿಯೊದಲ್ಲಿ ಕರೀನಾ ಕಪೂರ್ ಖಾನ್ ಪಾತ್ರದಲ್ಲಿ ವಿನಾ ಪ್ಯಾನ್ ಕರೀನಾ ರಂತೆ ಡ್ರೆಸ್ ಧರಿಸಿ ಅದೇ ರೀತಿ ನೃತ್ಯ ಮಾಡಿದ್ದಾರೆ. ಅವರ ಗುಂಪಿನ ಇತರ ಸದಸ್ಯರು ಇನ್ನಿತರ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಈ ಇಂಡೋನೇಷ್ಯನ್ ವರ್ಷನ್ ನಲ್ಲಿ ಮೂಲ ಹಾಡಿನ ಪ್ರತಿಯೊಂದು ಶಾಟ್ ಅನ್ನು ಮೂಲ ಹಾಡಿನ ಪಾತ್ರಗಳಂತೆಯೇ ಒಂದೇ ರೀತಿಯ ಉಡುಪುಗಳನ್ನು ಧರಿಸಿ ಮರುಸೃಷ್ಟಿಸಿದ್ದಾರೆ. ಕೇಶವಿನ್ಯಾಸವು, ಉಡುಪು, ಕ್ರಿಯೆ ಎಲ್ಲವು ಮೂಲ ಹಾಡಿಗೆ ಹೊಂದಿಕೆಯಾಗುತ್ತಿದ್ದು, ಭಾರತಿಯ ಅಭಿಮಾನಿಗಳು ಕೂಡ ವಿನಾ ಅವರ ಈ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

LEAVE A REPLY

Please enter your comment!
Please enter your name here