ಹೊಸದಿಲ್ಲಿ: ಶೋರ್ನೂರು ಶಾಸಕ ಪಿಕೆ ಶಶಿ ವಿರುದ್ಧ ಸಿಪಿಎಂ ತನಿಖೆಯಲ್ಲಿತೊಡಗಿದೆ. ಶಾಸಕ ಶಸಿಯ ವಿರುದ್ಧ ಡಿವೈಎಫ್‍ಐ ಮಹಿಳಾ ನಾಯಕಿ ಲೈಂಗಿಕ ಕಿರುಕುಳ ದೂರು ನೀಡಿದ್ದರು. ಪಿಕೆಶಶಿ ವಿರುದ್ಧ ದೂರು ಸಿಕ್ಕ ಕೂಡಲೇ ತನಿಖೆಗೆ ಸಿಪಿಎಂ ಮುಂದಾಯಿತು ಸಿಪಿಎಂ ಪೊಲಿಟ್‍ಬ್ಯೂರೊ ಸದಸ್ಯೆ ಬೃಂದಾ ಕಾರಟ್ ಹೇಳಿದರು. ಮಹಿಳೆಯರ ವಿರುದ್ಧ ಲೈಂಗಿಕ ಅಕ್ರಮಗಳನ್ನು ಪಾರ್ಟಿಸಹಿಸುವುದಿಲ್ಲ. ಕಿರುಕುಳಕ್ಕೆ ಒಳಗಾದ ಮಹಿಳೆಗೆ ಎಲ್ಲ ಬೆಂಬಲವನ್ನು ನೀಡುಲಾಗುವುದು ಎಂದು ಬೃಂದ ಕಾರಟ್ ನುಡಿದರು.

ತನಗೆ ¸ದೂರು ಸಿಕ್ಕಿತ್ತು. ಆಗಲೆ ಅದನ್ನು ರಾಜ್ಯ ನಾಯಕರಿಗೆ ಕೊಟ್ಟೆ. ದೂರನ್ನು ಮುಚ್ಚಿಡಲು ಯತ್ನಿಸಲಾಯಿತೆಂಬ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಬೃಂದಾ ಹೇಳಿದರು.
ದೂರ ಸಿಕ್ಕಿದಾಗಲೇ ಶಶಿ ವಿರುದ್ಧ ತನಿಖೆ ಆರಂಭಿಸಿದ್ದೇವೆ ಎಂದು ಪೊಲಿಟ್ ಬ್ಯೂರೊ ಸದಸ್ಯ ರಾಮಚಂದ್ರನ್ ಪಿಳ್ಳೆ ಹೇಳಿದರು. ದೂರು ಮುಚ್ಚಿಡಲಾಗಿದೆಎಂಬ ಹೇಳಿಕೆಗಳು ದುರಾಆರೋಪವಾಗಿದೆ. ತಪ್ಪುಮಾಡಿದ ಯಾರನ್ನು ಪಾರ್ಟಿ ರಕ್ಷಿಸುವುದಿಲ್ಲ. ಶಶಿ ವಿರುದ್ಧ ತನಿಖೇ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ. ಪಾರ್ಟಿಗೆ ಸಿಕ್ಕಿದ ದೂರನ್ನುಪೊಲೀಸರಿಗೆ ಕೊಡಲಾಗುವುದಿಲ್ಲ ಎಂದು ಎಸ್ ರಆಮಚಂದ್ರನ್ ಪಿಳ್ಳೆ ಹೇಳಿದರು.

Leave a Reply