ಪಂದಳಂ(ಕೇರಳ): ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್‍ನಲ್ಲಿ ಚಾಲಕ ಕುಸಿದು ಬಿದ್ದ ಘಟನೆ ನಡೆದಿದೆ. ಕೂಡಲೇ ಜಾಗೃತರಾದ ಬಸ್‍ಕಂಡಕ್ಟರ್ ಬಸ್ಸಿನ ನಿಯಂತ್ರಣಕ್ಕೆ ತಂದು ಬಸ್‍ನಿಲ್ಲಿಸಲು ಯಶಸ್ವಿಯಾದರು. ಕಂಡಕ್ಟರ್‍ರ ಸಮಯ ಪ್ರಜ್ಞೆಯಿಂದಾಗಿ ಚಾಲಕ ಮತ್ತು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಶುಕ್ರವಾರ ತುಂಬಮನ್ ಜಂಕ್ಷನ್ ಬಳಿ ಘಟನೆ ನಡೆದಿದೆ.

ಪತ್ತನಂತಿಟ್ಟದಿಂದ ಮಾವೇಲಿಕ್ಕರ ಎಂಬಲ್ಲಿಗೆ ಕೆಸ್ಸಾರ್ಟಿಸಿ ಬಸ್ ಹೊರಟಿತ್ತು. ಬಸ್ ತುಂಬಮನ್ ಜಂಕ್ಷನ್ ಹತ್ತಿರ ಬಂದಾಗ ಬಸ್ ಚಾಲನೆ ಮಾಡುತ್ತಿದ್ದ ಚಾಲಕ ರೊಬಿ ಜಾರ್ಜ್‍ರಿಗೆ(40) ತಲೆಸುತ್ತು ಬಂದು ಬಸ್ಸಿನಲ್ಲೆ ಬೀಳ ತೋಡಗಿದ್ದರು.

ಕಂಡಕ್ಟರ್ ಝೈದ್ ಸಿಹಾಸ್ ಇದನ್ನು ಗಮನಿಸಿದ್ದಾರೆ. ಕೂಡಲೆ ಕಾರ್ಯಪ್ರವೃತ್ತರಾದ ಸಿಹಾಸ್ ಬಸ್ಸಿನ ಚಾಲಕ ಸೀಟಿನೆಗೆ ಓಡಿ ಹೋಗಿ ಬಸ್ಸಿನ ನಿಯಂತ್ರಣವನ್ನು ತನ್ನ ಕೈಗೆ ತೆಗೆದುಕೊಂಡರು. ವೇಗವನ್ನು ಕಡಿಮೆ ಮಾಡಿದರು. ರಸ್ತೆ ಬದಿಯ ಆಡಿಟೋರಿಯಂನ ಗೋಡೆಗೆ ತಾಗಿಸಿ ನಿಲಿಸುವಲ್ಲಿ ಯಶಸ್ವಿಯಾಧರು. ಹೆದರಿದ್ದ ಪ್ರಯಾಣಿಕರು ಬಸ್ ನಿಂತೊಡನೆ ಬಸ್ಸಿನಿಂದ ಇಳಿದಿದ್ದಾರೆ.

ಘಟನೆಯ ನಂತರ ಸ್ಥಳದಲ್ಲಿದ್ದ ಆಟೊ ಚಾಲಕರು ಬಸ್ ಚಾಲಕನನ್ನು ಚಾಲಕನ ಸೀಟಿನಿಂದ ಹೊರಗೆ ತೆಗೆದು ಸ್ಥಳೀಯ ಸಾಮಾಜಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಪತ್ತನಂತಿಟ್ಟದ ಜನರಲ್ ಆಸ್ಪತ್ರೆಗೆದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದರು.

Leave a Reply