ಚೆನ್ನೈ: ಸರ್ಕಾರಿ ಸಾರಿಗೆ ನೌಕರರ ಮುಷ್ಕರದಿಂದ ಜನಸಾಮಾನ್ಯರು ತೊಂದರೆಗೊಳಗಾಗುವುದು ಸಹಜ. ಜನರು ಸಂಚಾರಕ್ಕಾಗಿ ಪರದಾಡುತ್ತಾರೆ. ಆದರೆ ಇಲ್ಲೊಬ್ಬರು ಶಾಸಕರೊಬ್ಬರು ಸ್ವತಃ ಸಾರಿಗೆ ವಾಹನದ ಚಾಲಕರಾಗಿ ಕಾರ್ಯ ನಿರ್ವಹಿಸಿದ ಘಟನೆಗೆ ತಮಿಳುನಾಡಲ್ಲಿ ನಡೆದಿದೆ.

ಮುಷ್ಕರದಿಂದ ಪ್ರಯಾಣಿಕರು ಯಾವುದೇ ವಾಹನಗಳ ಸೌಕರ್ಯವಿಲ್ಲದೆ ಪರದಾಡುವ ಪರಿಸ್ಥಿತಿಯನ್ನು ಮನಗಂಡು, ಶಾಸಕ ರಾಜಕೃಷ್ಣನ್ 70 ಪ್ರಯಾಣಿಕರನ್ನು ಬಸ್ಸಿಗೆ ಹತ್ತಿಸಿಕೊಂಡು ಅಂಧಿಯೂರಿನಿಂದ ಭವಾನಿ ಎಂಬಲ್ಲಿಗೆ ತಾವೇ ಸ್ವತಃ ಬಸ್ಸನ್ನು ಚಲಾಯಿಸಿ ಕೊಂಡು ಹೋಗಿದ್ದಾರೆ. ಜನಪ್ರತಿನಿಧಿ ನಿಜಕ್ಕೂ ಪ್ರತಿನಿಧಿಸಿದ್ದು ಶ್ಲಾಘನೀಯವಾಗಿದೆ.

Leave a Reply