ಸುಮಾರು ಮೂರು ವರ್ಷಗಳ ಹಿಂದೆ ವಿಶೇಷವಾದ ಜಾಹಿರಾತು ಪ್ರಕಟವಾಗಿತ್ತು. ಅದನ್ನು ಇಲ್ಲಿ ನೀಡಿತ್ತಿದ್ದೇವೆ.

ಮನೆ ಮಾರಾಟಕ್ಕಿದೆ ಎಂಬ ಜಾಹೀರಾತುಗಳನ್ನು ನಾವು ಸಾಮಾನ್ಯವಾಗಿ ಕಾಣುತ್ತೇವೆ. ಆದರೆ ಇತ್ತೀಚೆಗೆ ಆನ್‍ಲೈನ್‍ನಲ್ಲಿ ಇಂಡೋ ನೇಶ್ಯದಿಂದ ಜಾಹೀರಾತು ಬಹಳ ಸುಪರ್ ಹಿಟ್ ಎನಿಸಿತು. ಮನೆ ಯೊಂದಿಗೆ ಫ್ರೀಯಾಗಿ ದೊರೆಯುವ ವಸ್ತುವೇ ಎಲ್ಲರಲ್ಲೂ ಸಂಚಲನ ವುಂಟುಮಾಡಿತು.

ಎರಡು ಬೆಡ್‍ರೂಮ್‍ಗಳು, ಅಷ್ಟೇ ಬಾತ್‍ರೂಮ್‍ಗಳು, ಪಾರ್ಕಿಂಗ್ ಸ್ಥಳವೂ ಮೀನು ಹಿಡಿಯಲು ಕೊಳವೂ ಇರುವ ಒಂದಂತಸ್ತಿನ ಮನೆ ಖರೀದಿಸಿದರೆ ಪತ್ನಿ ಉಚಿತ ಎಂಬ ಆಕರ್ಷಕ ಜಾಹೀರಾತು. ವಿನ ಲಿಯಾ ಎಂಬ 40 ವಯಸ್ಸಿನ ವಿಧವೆ ಮನೆಯ ಮುಂದೆ ಕಾರಿಗೆ ಒರಗಿ ನಿಂತಿರುವ ಚಿತ್ರವನ್ನೂ ಜಾಹೀರಾತು ಒಳಗೊಂಡಿತ್ತು.

ಬ್ಯೂಟಿ ಪಾರ್ಲರ್‍ನ ಒಡತಿಯಾದ ಲಿಯಾರ ಇಂಡೋನೇಶ್ಯದ ಆ ಮನೆಗೆ 47 ಲಕ್ಷ ರೂಪಾಯಿ ಮತ್ತು ದರದಲ್ಲಿ ಯಾವುದೇ ಕಾರಣಕ್ಕೂ ವಿನಾಯಿತಿ ಯಿಲ್ಲವೆಂದೂ ಸ್ಪಷ್ಟಪಡಿಸಲಾಗಿತ್ತು. ಜಾಹೀರಾತು ಪ್ರಕಟವಾದದ್ದೇ ತಡ ಸಾವಿರಾರು ಮಂದಿ ಇದನ್ನು ಶೇರ್ ಮಾಡಿ, ಕಮೆಂಟ್‍ಗಳ ಸುರಿಮಳೆಯೇ ಆಯಿತು. ಯುವಕರು ಮಾತ್ರವಲ್ಲ, ಪೆÇಲೀಸರೂ ನನ್ನನ್ನು ಹುಡುಕಿಕೊಂಡು ಬಂದರೆಂದು ಲಿಯಾ ಹೇಳುತ್ತಾರೆ. ಸಭ್ಯತೆಗೆ ನಿಲುಕದ ಜಾಹೀರಾತು ಎಂದು ಇಂಡೋನೇಶ್ಯಾ ಪೆÇಲೀಸರ ವಾದ. ಆದರೆ ಲಿಯಾ ಹೇಳುತ್ತಾರೆ,

“ನಾನು ಮನೆಯನ್ನು ಮಾರಾಟಕ್ಕಿಟ್ಟಾಗ ಅದಕ್ಕೆ ಗಿರಾಕಿಗಳೇ ಸಿಗಲಿಲ್ಲ. ಅದಕ್ಕೆ ರಿಯಲ್ ಎಸ್ಟೇಟ್‍ನ ಏಜೆಂಟ್ ಆದ ಗೆಳೆಯನಿಗೆ ಕೆಲಸ ಒಪ್ಪಿಸಿದೆ. ಮನೆಯನ್ನು ಖರೀದಿಸುವವರು ಕುಟುಂಬ ಜೀವನ ನಡೆಸಲು ಇಚ್ಛಿಸುವವರಾದರೆ ಅವ ರನ್ನು ವಿವಾಹವಾಗಲು ಸಿದ್ಧಳಿರು ವುದಾಗಿ ಮಾತ್ರ ಹೇಳಿದ್ದೆ. ಅದೇ ಈ ರೀತಿಯ ಜಾಹೀರಾತಿಗೆ ಕಾರಣ ವಾಯಿತು. ಹಲವಾರು ಮಂದಿ ಮನೆ ಯೊಂದಿಗೆ ಪತ್ನಿಯನ್ನು ಉಚಿತ ವಾಗಿ ಪಡೆಯುವ ಹುಮ್ಮಸ್ಸಿನಿಂದ ಬಂದರೂ ಓರ್ವರೊಂದಿಗೂ ತನ್ನ ವಿವಾಹ ನಡೆಯಲಿದೆಯೆಂದು ಎರಡು ಮಕ್ಕಳ ಮಾತೆಯಾಗಿರುವ ಲಿಯಾ ಹೇಳುತ್ತಾರೆ.”

Leave a Reply