ಚೆನ್ನೈ : ಸಾಧನೆಗೆ ವಯಸ್ಸಿನ ಮಿತಿ ಇಲ್ಲ, ಹಾಗೆಯೇ ಕಲಿಕೆಗೂ ವಯಸ್ಸಿನ ಮಿತಿ ಇಲ್ಲ. ತಮ್ಮ 91 ನೇ ವಯಸ್ಸಿನಲ್ಲೂ ಸಿಎ ಪ್ರಾಕ್ಟೀಸ್ ಮಾಡುತ್ತಿರುವ ವ್ಯಕ್ತಿಯೊಬ್ಬರು ಪಿಎಚ್‌ಡಿ ಪದವಿ ಪಡೆದು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.

ತಮಿಳುನಾಡು ಚಾರ್ಟರ್ಡ್ ಅಕೌಂಟೆಂಟ್ ಎಸ್.ಎಂ. ಮಿಸ್ಕಿನ್ ಅವರು ತಮ್ಮ 91 ನೇ ವಯಸ್ಸಿನಲ್ಲಿ ಅಭ್ಯಾಸ ಮಾಡುತ್ತಿದ್ದು, ಚೆಕ್ ವಂಚನೆ ವಿಷಯದ ಬಗ್ಗೆ ಅವರು ಪಿಹೆಚ್ ಡಿ ಪದವಿ ಪಡೆದಿದ್ದಾರೆ. ಪಿಎಚ್‌ಡಿ ಪದವಿ ಪಡೆದ ತಮಿಳುನಾಡಿನ ಮಿಸ್ಕಿನ್ ರವರು ತಮ್ಮ ಈ ಪ್ರಬಂಧಕ್ಕಾಗಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನ 400 ಪ್ರಕರಣಗಳನ್ನು ವಿಶ್ಲೇಷಿಸಿದ್ದಾರೆ. 1950 ರಲ್ಲಿ ಲೊಯೊಲಾ ಕಾಲೇಜಿನಿಂದ (ಚೆನ್ನೈ) ಅವರು ಪದವಿ ಪಡೆದರು.

LEAVE A REPLY

Please enter your comment!
Please enter your name here