ಬೇಕಾಗುವ ಸಾಮಗ್ರಿಗಳು:

ಒಂದು ಲೀಟರ್ ಹಾಲು, ಕಾಲು ಕಪ್ ಕೋಕೋ ಪೌಡರ್, ಕಾಲು ಕಪ್ ವೆನಿಲಾ ಕಸ್ಟರ್ಡ್ ಪೌಡರ್, ಅರ್ಧ ಕಪ್ ಸಕ್ಕರೆ, 50 ಗ್ರಾಂ. ಬಾದಾಮಿ ಮತ್ತು ಪಿಸ್ತಾ ತುಂಡುಗಳು, ಒಂದು ದೊಡ್ಡ ಚಾಕಲೇಟ್ ಬಾರ್, 2 ದೊಡ್ಡ ಗಾತ್ರದ ಸ್ಪೋಂಜ್ ಕೇಕ್.

ಮಾಡುವ ವಿಧಾನ:

ಹಾಲು ಬಿಸಿ ಮಾಡುವ ಮೊದಲು ಅರ್ಧ ಗ್ಲಾಸ್ ಹಾಲಿಗೆ ಕಸ್ಟರ್ಡ್ ಪೌಡರ್ ಮತ್ತು ಕೋಕೋ ಕಲಸಿರಿ. ಉಳಿದ ಹಾಲು ಬಿಸಿಯಾದ ನಂತರ ಕಸ್ಟರ್ಡ್, ಕೋಕೋ ಮಿಶ್ರಣ ಮತ್ತು ಸಕ್ಕರೆ ಹಾಕಿ ಕಲಸಿ ಕುದಿಸಿರಿ. ಆರಿದ ನಂತರ ಒಂದು ಗಂಟೆ ಫ್ರಿಜ್‍ನಲ್ಲಿಡಿ.

ಕೇಕ್‍ಗಳನ್ನು ವೃತ್ತಾಕಾರವಾಗಿ ಪ್ರತಿಯೊಂದು 2 ಅಥವಾ 3 ಭಾಗಗಳಾಗಿ ಕತ್ತರಿಸಿ. ಒಂದು ಪಾರದರ್ಶಕ ಅಗಲ ಬಾಯಿಯ ಬೌಲ್‍ನಲ್ಲಿ ಒಂದು ತುಂಡು ಕೇಕ್ ಇಟ್ಟು ಅದರ ಮೇಲೆ ಫ್ರಿಜ್‍ನಲ್ಲಿಟ್ಟು ತಣ್ಣಗಾದ ಕೋಕೋ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ಚಮಚದಿಂದ ಹಾಕಿ ಅದೇ ಚಮಚದಿಂದ ಒತ್ತಿದಾಗ ಕೇಕ್ ಹೀರಿಕೊಳ್ಳುತ್ತದೆ. ಇದೇ ರೀತಿ ಒಂದರ ಮೇಲೊಂದು ಕೇಕ್ ಮತ್ತು ಕೊಕೋ ಮಿಶ್ರಣ ಸುರಿಯುತ್ತಾ ಒತ್ತಿರಿ. ಮೇಲಿನಿಂದ ಬಾದಾಮಿ, ಪಿಸ್ತಾ ಹಾಗೂ ಚಾಕಲೇಟ್ ಬಾರ್‍ನ ತುರಿಯನ್ನು ಉದುರಿಸಿ ಸವಿಯಿರಿ.

ಸಾಂದರ್ಭಿಕ ಚಿತ್ರ

Leave a Reply