ನೀವು ಯಾವುದೇ ಮುಖ ಕವಚ ಬಳಸಿ, ಅದು ಸರ್ಜಿಕಲ್ ಇರಲಿ ಅಥವಾ ಕಾಟನ್ ಇರಲಿ ಅದನ್ನು ನಿಯಮಿತವಾಗಿ ಬದಲಾಯಿಸುವುದು ಕಡ್ಡಾಯ. ಕೆಲವನ್ನು ತೊಳೆದುಕೊಂಡು ಮತ್ತೆ ಬಳಸಬಹುದು, ಮುಖ ಕವಚ ಹೊರಭಾಗದಲ್ಲಿ ಕೊರೋನಾ ವೈರಸ್ ಕೂರುವ ಸಾಧ್ಯತೆ ಇರುವುದರಿಂದ ತೊಳೆಯುವುದು ಅಗತ್ಯ.

ಸರ್ಜಿಕಲ್ ಮುಖ ಕವಚವನ್ನು ಒಂದು ರೀತಿಯ ಕಾಗದದಿಂದ ತಯಾರಿಸುವುದರಿಂದ ತೊಳೆಯುವುದು ಸಾಧ್ಯವಿಲ್ಲ. ಹೀಗಾಗಿ ಇದನ್ನು ಸ್ಟರಿಲೈಸ್ ಮಾಡಿ ಮತ್ತೆ ಬಳಸುವುದಕ್ಕೆ ಯತ್ನಿಸಬೇಡಿ. ನಿಮ್ಮ ಉಸಿರಾಟ ದಿಂದಲೇ ಅದು ಒದ್ದೆಯಾಗಬಹುದು ಅಥವಾ ಹಾಳಾಗಬಹುದು. 3-4 ಗಂಟೆಗಳ ನಂತರ ಅದನ್ನು ಬದಲಾ ಯಿಸಬೇಕಾಗುತ್ತದೆ. ಹಾಗೆಯೇ ವೈದ್ಯರು ಹಾಗೂ ಇನ್ನಿತರ ಆರೋಗ್ಯ ಕಾರ್ಯಕರ್ತರು ಬಳಸುವ ಎನ್- 95 ಮುಖಕವಚವನ್ನು ಕೂಡ ತೊಳೆಯುವುದು ಸಾಧ್ಯವಿಲ್ಲ. ತೊಳೆಯುವಾಗ ಅದರಲ್ಲಿರುವ ಫಿಲ್ಟರ್ ‌ಗೆ – ಹಾನಿಯಾಗಬಹುದು. ಹೀಗಾಗಿ ಒಂದು ಸಲ ಬಳಸಿ ಬಿಸಾಡುವುದು ಸೂಕ್ತ. ಕಾಟನ್ ಮುಖ ಕವಚ, ಅದು ನೀವೇ ತಯಾರಿಸಿಕೊಂಡಿದ್ದಿರಲಿ ಅಥವಾ ಖರೀದಿಸಿದ್ದಿರಲಿ, ನಿತ್ಯ ಒಂದು ಸಲ ಸೋಪ್ ಅಥವಾ ಸೋಪ್ ಪುಡಿಯಿಂದ ತೊಳೆದುಕೊಳ್ಳಿ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ. ಅಂಗಡಿಯಿಂದ ಅಥವಾ ಆನ್‌ಲೈನ್ ನಿಂದ ಖರೀದಿಸಿದ ಮುಖಗವಚ ತೊಳೆಯುವ ವಿಧಾನದ ಬಗ್ಗೆ ಸೂಚನೆಗಳಿರುತ್ತವೆ. ಸ್ವಲ್ಪ ಬಿಸಿ ನೀರಿನಿಂದ ಸೋಪ್ ಬಳಸಿ ತೊಳೆದರೆ ವೈರಸ್ ಸಾಯುತ್ತದೆ.

ತೊಳೆದ ಮುಖ ಕವಚವನ್ನು ಡ್ರೈಯರ್‌ನಿಂದ ಒಣಗಿಸಬಹುದು ಅಥವಾ ಸ್ವಚ್ಛವಾದ ಟೇಬಲ್ ಮೇಲಿ ಟ್ಟರೆ ಒಣಗುತ್ತದೆ. ತಂತಿಗೆ ನೇತು ಹಾಕಬೇಡಿ. ಅದರ ಆಕಾರದಲ್ಲಿ ಬದಲಾವಣೆಯಾಗುವುದರಿಂದ ಈ ಎಚ್ಚರಿಕೆ ಅಗತ್ಯ. ಬಿಸಿಲಿನಲ್ಲಿ ಒಣಗಿಸಿದರೆ ಅತಿ ನೇರಳೆ ಕಿರಣದಿಂದಾಗಿ ವೈರಸ್ ಕೆಲವೇ ನಿಮಿಷಗಳಲ್ಲಿ ತೊಲಗುತ್ತದೆ. ಒಣಗಿದ ಮುಖ ಕವಚಗಳನ್ನು ಸ್ವಚ್ಛ ವಾದ ಪ್ಲಾಸ್ಟಿಕ್ ಕವರ್ ಅಥವಾ ಡಬ್ಬಿಯಲ್ಲಿ ಇಟ್ಟು ಅಗತ್ಯವಿದ್ದಾಗ ಬಳಸಿ.

LEAVE A REPLY

Please enter your comment!
Please enter your name here