ಒಟ್ಟಾವಾ: ಸಾಮಾಜಿಕ ಜಾಲತಾಣಗಳ ಈ ಕಾಲದಲ್ಲಿ ಅತ್ಯಂತ ಸಾಹಸೀ ಕಾರ್ಯ ನಡೆಸಿದವರಿದ್ದಾರೆ. ಆದರೆ ಇಂತಹ ಸಾಹಸೀ ಕಾರ್ಯದಲ್ಲಿ ತೊಡಗಿ ಹಲವು ಭಾರಿ ದಾರುಣ ಸಾವು ಕಂಡ ಘಟನೆಗಳೂ ಧಾರಾಳ ಇವೆ. ಸಾಮಾಜಿಕ ಜಾಲತಾಣಗಳ ಮುಖ್ಯ ತಾಣ ಯುಟ್ಯೂಬ್ ಮೂಲಕ ಹಲವು ಸಾಹಸೀ ವೀಡಿಯೋ ಪ್ರಸಾರ ಮಾಡಿದ ತಾರೆ ಕೆನಡಿಯನ್ ಯುವಕ ಈ ರೀತಿಯ ದಾರುಣ ಅಂತ್ಯ ಕಂಡಿದ್ದಾರೆ.

ಆಕಾಶದಲ್ಲಿ ಹಾರಿ ವೀಡಿಯೋ ಚಿತ್ರೀಕರಿಸಿ ಯುಟ್ಯೂಬ್ ನಲ್ಲಿ ಪ್ರಸಾರ ಮಾಡುತ್ತಿದ್ದ ಕೆನಡಿಯನ್ ರಾಪರ್ ಜಾನ್ ಜೇಂಸ್ ಬ್ರಿಟನ್ ನಲ್ಲಿ ಪ್ರಾಣ ತೆರಬೇಕಾಯಿತು. ಹೀಗೇ ಚಿತ್ರೀಕರಣದಲ್ಲಿ ತೊಡಗಿದಾಗ ಹಠಾತ್ತನೆ ವಿಮಾನ ಧರೆಗುರುಳಿದ್ದು ಜಾನ್ ಗೆ ಮಾರಕವಾಯಿತು. ಪ್ಯಾರಾಚೂಟ್ ಬಿಡಿಸುವಷ್ಟರಲ್ಲಿ ನಿಯಂತ್ರಣ ಕಳಕೊಂಡಾಗ ದಾರಣ ಅಂತ್ಯ ಕಾಣಬೇಕಾಯಿತು.

Leave a Reply