ಜಿಎಸ್ಕೆ ಎಂಬ ಹೆಸರಾಂತ ಕಂಪೆನಿಯು ಉತ್ಪಾದಿಸುವ ರಾನಿಟಿಡಿನ್ ಎಂಬ ಔಷಧದ ಬಗ್ಗೆ ಈಗಾಗಲೇ ವಿಶ್ವದಾದ್ಯಂತ ವಾರ್ತೆ ಪ್ರಚಾರದಲ್ಲಿವೆ. ಈ ನಿಟ್ಟಿನಲ್ಲಿ ಹಲವರಿಗೆ ಸಂಶಯಗಳಿವೆ. ಕೆಲವರು ನನಗೆ ಇನ್ಬಾಕ್ಸಿಗೆ ಸಂದೇಶ ಕಳುಹಿಸಿ ಕೇಳಿದ್ದಾರೆ. “ಭಾರತದಲ್ಲಿ ಉತ್ಪಾದಿಸುವ ಮೇಲಿನ ಔಷಧಿಯ ಬಗ್ಗೆ ಗೊತ್ತಿಲ್ಲದವರು ಮತ್ತು ಇದನ್ನು ಉಪಯೋಗಿಸ ದವರು ಬಹಳ ಕಡಿಮೆ. ಗ್ಯಾಸ್ಟ್ರಿಕ್ ದೋಷ ಕಂಡುಬಂದಾಗ ಔಷಧಿ ಅಂಗಡಿಯಿಂದ ಕೇಳಿ ಪಡೆದುಕೊಳ್ಳುವ ಒಂದು ಔಷಧಿಯಾಗಿದೆ ಇದು. ಆದ್ದರಿಂದಲೇ ಭೀತಿ ಇರಬಹು
ದಾದರೂ ಸಹಜವೆ.

ಜಿಎಸ್ಕೆ ಕಂಪೆನಿಯಿಂದ ಉತ್ಪಾದನೆ ಯಾಗುವ ಝಿನ್‍ಟ್ಯಾಕ್ ಎಂಬ ಹೆಸರಿರುವ ಇದಕ್ಕೆ ರಾನಿಟಿಡಿನ್ ಎಂಬ ರಾಸಾಯನವನ್ನು ಸರಬರಾಜು ಮಾಡುವ saraca ಎಂಬ ಕಂಪೆನಿಯು ಉತ್ಪಾದಿಸಿದ ರಾಸಾಯನದಲ್ಲಿ ಕಂಡು ಬಂದ ಕ್ಯಾನ್ಸರ್‍ಗೆ ಸಾಧ್ಯತೆಯಿರುವ ಅಂಶವು ಕಂಡು ಬಂದ ಹಿನ್ನೆಲೆಯಲ್ಲಿ ಆ ಕಂಪೆನಿಗೆ ನೀಡಿರುವ ಪರವಾನಿಗೆಯನ್ನು ಔಷಧಿಯ ಗುಣಮಟ್ಟ ನಿಯಂತ್ರಣ ಇಲಾಖೆ ರದ್ದುಪಡಿಸಿದೆ. ಮಾತ್ರವಲ್ಲ ಮಾರುಕಟ್ಟೆಯಿಂದ ಔಷಧವನ್ನು ರಿಕಾಲ್ ಮಾಡಲು ಆದೇಶಿಸಿದೆ. ಆದ್ದರಿಂದ ಇದುವರೆಗೆ ಅದನ್ನು ಉಪಯೋಗಿಸಿದವರು ಗಾಬರಿಗೊಳ್ಳುವ ಅಗತ್ಯವಿಲ್ಲ. ಬದಲಾಗಿ ವೈದ್ಯರ ಸಲಹೆಯನ್ನು ಪಡೆದು ಅದರ ಬದಲಿಗೆ ಬೇರೆ
ಔಷಧಿಯನ್ನು ಉಪಯೋಗಿಸಬಹುದು.

ಏ.ಎಸ್. ದೇರಳಕಟ್ಟೆ

LEAVE A REPLY

Please enter your comment!
Please enter your name here