ಮುಝಪ್ಫರ್‍ನಗರ: ಉತ್ತರ ಪ್ರದೇಶದ ಮುಝಪ್ಫರ್‍ನಗರದಲ್ಲಿ ಡಿವೈಡರ್‍ಗೆ ಕಾರು ಢಿಕ್ಕಿಹೊಡೆದು ಹಲವು ಬಾರಿ ಪಲ್ಟಿಯಾಗಿದ್ದು ಮಾರ್ಗದ ಬದಿಯಲ್ಲಿ ನಡೆದು ಹೋಗುತ್ತಿದ್ದ ವೃದ್ಧೆಯೊಬ್ಬರು ಕಾರಿನಡಿಗೆ ಸಿಲುಕಿ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದವರು ಆಶ್ಚರ್ಯಕಾರಿಯಾಗಿ ಪಾರಾಗಿದ್ದಾರೆ.

ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್‍ಗೆ ಢಿಕ್ಕಿಯಾಗಿ ಪಲ್ಟಿಹೊಡೆಯುತ್ತಾ ವೃದ್ಧೆಯ ಮೇಲೆ ಹೊರಳಿ ಬೀಳುತ್ತಿರುವ ದೃಶ್ಯಗಳಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿದೆ. ಕಾರು ಚಲಾಯಿಸುತ್ತಿದ್ದ ವ್ಯಕ್ತಿ ತೂಕಡಿಸಿದ್ದು ಅಪಘಾತಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರಿನಲ್ಲಿ ಮೂವರು ಹರಿದ್ವಾರಕ್ಕೆ ತೆರಳುತ್ತಿದ್ದರು. ಇವರನ್ನು ಗಾಯಗೊಂಡಿರುವ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆಂದು ಮುಝಫ್ಫರ್ ನಗರ ಪೊಲೀಸ್ ಸುಪರಿಡೆಂಟ್ ಓಂವೀರ್ ಸಿಂಗ್ ಹೇಳಿದರು.

Leave a Reply