ಬೇಕಾಗುವ ಸಾಮಗ್ರಿಗಳು:
ಕ್ಯಾರೆಟ್- 1/4
ಕೆಜಿ (3-4),
ನೈಅಕ್ಕಿ- ಒಂದು ಹಿಡಿ (50 ಗ್ರಾಂ),
ಸಕ್ಕರೆ- 5-6 ಟೀ.ಸ್ಪೂ.,
ಹಾಲು- ಒಂದು ಲೀಟರ್,
ಕಂಡೆನ್ಸ್‍ಡ್ ಮಿಲ್ಕ್- 2 ಟೀ.ಸ್ಪೂ.,
ತುಪ್ಪ, ಗೋಡಂಬಿ- ಅಗತ್ಯಕ್ಕೆ,
ಏಲಕ್ಕಿ ಹುಡಿ- 1/4 ಟೀ.ಸ್ಪೂ.

Representational Image

ತಯಾರಿಸುವ ವಿಧಾನ:

ಕ್ಯಾರೆಟ್ ಅನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಸ್ವಲ್ಪ ನೀರು ಸೇರಿಸಿ ಬೇಯಿಸಿ. ತಣ್ಣಗಾದ ಬಳಿಕ ಬೇಯಿಸಲು ಉಪಯೋಗಿಸಿದ ನೀರನ್ನೇ ಉಪಯೋಗಿಸಿ ಮಿಕ್ಸಿಯಲ್ಲಿ ಅರೆಯಿರಿ. ನೈಅಕ್ಕಿಯನ್ನು ಕುಕ್ಕರಿನಲ್ಲಿ ಬೇಯಿಸಿ ಸ್ವಲ್ಪ ಹಾಲು ಸೇರಿಸಿ. ತಳದಪ್ಪವಿರುವ ಪಾತ್ರೆಯನ್ನು ಒಲೆಯ ಮೇಲಿಟ್ಟು ತುಪ್ಪ ಸೇರಿಸಿ, ಅದಕ್ಕೆ ಕ್ಯಾರೆಟ್ ಮಿಶ್ರಣ ಸೇರಿಸಿ. ಹಸಿವಾಸನೆ ಹೋಗಿ ನೀರು ಆರಿದ ಬಳಿಕ ಸಕ್ಕರೆ ಸೇರಿಸಿ ಪುನಃ ಕುದಿಸಿ. ಹಾಲು ಸೇರಿಸಿ ಬೇಯಿಸಿದ್ದ ಅನ್ನ ಸೇರಿಸಿ ಪುನಃ ಸ್ವಲ್ಪ ಹಾಲು ಸೇರಿಸಿ ಚೆನ್ನಾಗಿ ಕುದಿಸಿ. ದಪ್ಪಗಾದಂತೆ ಎರಡು ಚಮಚ ಕಂಡನ್‍ಸ್ಟ್ ಮಿಲ್ಕ್ ಸೇರಿಸಿ ಏಲಕ್ಕಿ ಹುಡಿ ಹಾಕಿ ಗೋಡಂಬಿಯನ್ನು ತುಪ್ಪದಲ್ಲಿ ಹುರಿದು ಸೇರಿಸಿ. ಸ್ವಲ್ಪ ಹೊತ್ತು ಬಿಟ್ಟು ಬಿಸಿಯಾಗಿರುವಾಗಲೇ ಸವಿಯಿರಿ.

LEAVE A REPLY

Please enter your comment!
Please enter your name here