ಗುಂಪು ಹಲ್ಲೆ-ಹತ್ಯೆಯನ್ನು ನಿಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗಪತ್ರ ಬರೆದಿದ್ದ 49 ಗಣ್ಯರ ವಿರುದ್ಧ ದಾಖಲಾಗಿದ್ದ ದೇಶದ್ರೋಹ ಪ್ರಕರಣವನ್ನು ಬಿಹಾರ ಪೊಲೀಸರು ಕೈಬಿಟ್ಟಿದ್ದು, ಇದು ದುರುದ್ದೇಶದಿಂದ ಗಣ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಅವರ ವಿರುದ್ಧದ ಆರೋಪಗಳಿಗೆ ಯಾವುದೇ ಆಧಾರಗಳಿಲ್ಲ ಎಂಬುದು ತನಿಖೆ ವೇಳೆ ಪತ್ತೆಯಾಯಿತು. ಹೀಗಾಗಿ ಪ್ರಕರಣವನ್ನು ರದ್ದು ಮಾಡುವಂತೆ ಆದೇಶಿಸಿದ್ದೇನೆ’ ಎಂದು ಮುಜಪ್ಪರಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ಸಿನ್ಹಾ ಹೇಳಿದ್ದರು.

ಮ್ಯಾಜಿಸ್ಟ್ರೇಟ್ ಕೋರ್ಟಿನ ಮುಖ್ಯ ನ್ಯಾಯಾಧೀಶರ ಆದೇಶದ ಮೇರೆಗೆ ಸಾದಾರ್ ಪೊಲೀಸ್ ಠಾಣೆಯಲ್ಲಿ ಕಳೆದ ವಾರ ಎಫ್ ಐಆರ್ ದಾಖಲಿಸಿದ್ದ ಸ್ಥಳೀಯ ವಕೀಲ ಸುಧೀರ್ ಕುಮಾರ್ ಓಝಾ, ಅದನ್ನು ಎಸ್ ಎಸ್ ಪಿ ಕಚೇರಿಗೆ ವರ್ಗಾಯಿಸಿ ಎಫ್ ಐಆರ್ ದಾಖಲಿಸುವಂತೆ ಕೋರಿದ್ದರು. ಅಡೂರು ಗೋಪಾಲಕೃಷ್ಣ, ರಾಮಚಂದ್ರ ಗುಹಾ, ಮಣಿ ರತ್ನಂ, ಅಪರ್ಣ ಸೇನ್, ಅನುರಾಗ್ ಕಶ್ಯಪ್ , ಶ್ಯಾಮ್ ಬೆನಗಲ್ , ಸೌಮಿತ್ರ ಚಟರ್ಟಿ ಮತ್ತಿತರ ಗಣ್ಯರ ಅಭಿಪ್ರಾಯಗಳು ದೇಶಕ್ಕೆ ಮಾರಕವಾಗಿದ್ದು, ಕೋಮು ಆಧಾರದ ಮೇಲೆ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಕೀಲರು ಆರೋಪಿಸಿದ್ದರು.

ಇದೀಗ ಸೆಲೆಬ್ರಿಟಿಗಳ ವಿರುದ್ಧ ದೇಶದ್ರೋಹ ಕೇಸ್ ದಾಖಲಿಸಿದ್ದ ವಕೀಲ ವಿರುದ್ಧವೇ ಸುಳ್ಳು ಕೇಸಿನ ಪ್ರಕರಣ ದಾಖಲಾಗಲಿದೆ. ವಕೀಲ ಸುಧೀರ್ ಕುಮಾರ್ ಓಜಾರವರು ಗಣ್ಯರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ ಆರೋಪದ ಮೇಲೆ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಅಮರ್ ಉಜಾಲ ಪತ್ರಿಕೆ ವರದಿ ಮಾಡಿದೆ.

LEAVE A REPLY

Please enter your comment!
Please enter your name here