ಅಂಕಾರ: ಕೆಲವೊಮ್ಮೆ ಸಾಮಾಜಿಕ ಮಾಧ್ಯಮಗಳಲ್ಲಿ ಆಶ್ಚರ್ಯಕಾರಿಯಾದ ವೀಡಿಯೊಗಳು ವೈರಲ್ ಆಗುತ್ತವೆ. ಟರ್ಕಿಯಲ್ಲಿ ನಡೆದ ಒಂದು ಘಟನ ಹೃದಯಾಘಾತಕವಾಗಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲಾಗಿದೆ.
ರಸ್ತೆಯಲ್ಲಿ ನಡೆಯುತ್ತಿದ್ದ ಇಬ್ಬರು ಮಹಿಳೆಯರು ಅನೀರೀಕ್ಷಿತವಾಗಿ ಸೃಷ್ಟಿಯಾದ ಹೊಂಡದೊಳಗೆ ಬಿದ್ದರು. ಡಾ. ಸುಜನ್ ಕುಡೈ ಮತ್ತು ದಾದಿ ಒಲ್ಜಲೇಮ್ ಡುಯಮೆಜ್ ಪರಸ್ಪರ ಮಾತಾಡುತ್ತ ರಸ್ತೆ ಬದಿಯಲ್ಲಿ ನಡೆದಾಡುತ್ತ ಬರುತ್ತಿದ್ದರು. ರಸ್ತೆ ಬದಿ ಪಾದಚಾರಿಗಳಿಗೆ ನಿರ್ಮಿಸಲಾದ ಕಾಮಗಾರಿ ಅನಿರೀಕ್ಷಿತವಾಗಿ ಕುಸಿದಿದೆ. ಅದು ಅನಿರೀಕ್ಷಿತ ಅವಘಡವಾಗಿತ್ತು.
ವೀಡಿಯೊದಲ್ಲಿ ಇಬ್ಬರು ಮಹಿಳೆಯರು ಮಾತಾಡುತ್ತಾ ಫುಟ್‍ಪಾತ್‍ನಲ್ಲಿ ನಡೆಯುತ್ತಿರುವುದು ಕಾಣಿಸುತ್ತಿದೆ. ಹೀಗೆ ಮಾತಾಡುತ್ತ ಬರುವಾಗ ಸ್ವಲ್ಪ ಹೊತ್ತು ನಿಂತು ಮಾತಾಡಿದ್ದಾರೆ. ಕೂಡಲೇ ಫುಟ್‍ಪಾತ್ ಕುಸಿದು ಒಳಗೆ ಹೋಗಿದೆ. ಇಬ್ಬರು ಮಹಿಳೆಯರು ಒಳಗೆ ಎತ್ತಿಹಾಕಿದಂತೆ ಹೊಂಡದೊಳ್ಕೆ ಎಸೆಯಲ್ಪಟ್ಟರು.
ದುರ್ಘಟನೆ ನಡೆದ ಕೂಡಲೇ ಜನರು ಓಡಿ ಬಂದು ಮಹಿಳೆಯರನ್ನು ಹೊರ ತರುವ ಕೆಲಸದಲ್ಲಿ ನಿರತರಾದರು. ಮಹಿಳೆಯಿರಿಬ್ಬರನ್ನುಜನರು ಕಷ್ಟಪಟ್ಟು ಮೇಲೆತ್ತಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದಾರೆ. ವರದಿಯಾಗಿರುವ ಪ್ರಕಾರ ಇಬ್ಬರಿಗೂ ಗಂಭೀರ ಗಾಯಗಳೇನೂ ಅಲ್ಲಿಲ್ಲ. ಪೊಲೀಸರು ಇಡೀ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.