ನವದೆಹಲಿ: ಕೊರೊನಾ ಭೀತಿಯಿಂದಾಗಿ ಏಪ್ರಿಲ್ 1ರಿಂದ ಆರಂಭವಾಗಬೇಕಿರುವ ಜನಗಣತಿಎನ್‌ಪಿಆರ್ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಮುಂದೂಡುವ ಸಾಧ್ಯತೆ ದಟ್ಟವಾಗಿದೆ. ಈ ಸಂಬಂಧ ಆರೋಗ್ಯ ಸಚಿವಾಲಯ ಈಗಾಗಲೇ ಸಚಿವ ಸಂಪುಟಕ್ಕೆ ಶಿಫಾರಸು ಕಳುಹಿಸಿದ್ದು ಸದ್ಯದಲ್ಲೇ ಅಧಿಕೃತ ನಿರ್ಧಾರ ಪ್ರಕಟವಾಗುವ ನಿರೀಕ್ಷೆಯಿದೆ ಎನ್ನಲಾಗಿದೆ. ರಾಷ್ಟ್ರೀಯ ಜನಸಂಖ್ಯಾ ನೊಂದಣಿ ಕಾರ್ಯ ಕ್ರಮ ಜನ ಸಂಪರ್ಕ ಮೂಲಕವೇ ನಡೆಯಬೇಕಿದ್ದು ಇದರಿಂದ ಕೊರೊನಾ ಸೋಂಕು ನಿಯಂತ್ರಣಕ್ಕೆ ಸಾಮಾಜಿಕ ದೂರ ಕಾಯ್ದುಕೊಳ್ಳುವ ನೀತಿಗೆ ಪ್ರತಿ ಕೂಲವಾಗಬಹುದೆಂದು ಆರೋಗ್ಯ ಸಚಿವಾಲಯ ತನ್ನ ವರದಿಯಲ್ಲಿ ತಿಳಿಸಿದೆ. ಅಲ್ಲದೆ ಜನಗಣತಿ ಕಾರ್ಯಕರ್ತರು ಗುಂಪುಗೂಡುವ ಮತ್ತು ಮನೆ ಮನೆಗೆ ತೆರಳುವ ಪ್ರಕ್ರಿಯೆ ಅಪಾಯಕಾರಿ ಸನ್ನಿವೇಶಗಳಿಗೆ ಕಾರಣವಾಗಬಹುದೆಂದು ವಿವರಿಸಲಾಗಿದೆ.

ಅಷ್ಟೇ ಅಲ್ಲದೆ ಜನಗಣತಿಯನ್ನು ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿ ರಾಮನಾಥ್ ಕೋವಿಂದ್ರಿಂದಲೇ ಪ್ರಾರಂಭಿಸಬೇಕಾಗಿದ್ದು ಸದ್ಯ ಅವರು ಕೊರೊನಾ ಸೋಂಕಿನ ಶಂಕೆಯಿಂದಾಗಿ ತಮ್ಮ ಎಲ್ಲಾ ಅಧಿಕೃತ ಕಾಯಕ್ರಮಗಳನ್ನು ರದ್ದುಪಡಿಸಿದ್ದಾರೆ. ಇನ್ನೂ ಕೆಲವು ದಿನಗಳ ಕಾಲ ಅವರು ಯಾವುದೇ ಸಂದರ್ಶಕರನ್ನು ಭೇಟಿ ಮಾಡದಿರಲು ನಿರ್ಧರಿಸಿದ್ದಾರೆ. ಹೀಗಾಗಿ ಇದೊಂದು ತಾಂತ್ರಿಕ ಸ್ವರೂಪದ ಸಮಸ್ಯೆಯಾಗಿ ಪರಿಣಮಿಸಿದೆ.

LEAVE A REPLY

Please enter your comment!
Please enter your name here