ತನ್ನ ವೃದ್ಧ ತಾಯಿಯಲ್ಲಿ ಮಗಳು ರವೀನಾ ಸೂರಿ ಕೇಳುತ್ತಾರೆ, ಜೀವನದಲ್ಲಿ ಏನಾದರೂ ವಿಷಾದವಿದೆಯೇ? ಅದಕ್ಕೆ ತಾಯಿ ಹರ್ಭಜನ್ ಕೌರ್, ಹೌದು ನಾನು ಇದುವರೆಗೂ ನನ್ನ ಸ್ವಂತ ಹಣ ಸಂಪಾದಿಸಲಿಲ್ಲ ಎಂಬ ವಿಷಾದವಿದೆ ಎಂದು ಹೇಳುತ್ತಾರೆ. ಈ ಸಂಭಾಷಣೆ ಅಲ್ಲಿಗೆ ಮುಗಿದರೂ ಮಗಳಿಗೆ ತನ್ನ ತಾಯಿಯ ಆಸೆ ತೀರಿಸುವ ಅದಮ್ಯ ಬಯಕೆ. ಅದಕ್ಕಾಗಿ ಯಾವುದಾದರೂ ಬಿಸಿನೆಸ್ ಮಾಡಲು ತಾಯಿಯನ್ನು ಉತ್ತೇಜಿಸಿದರು. ಅವರ ಕುಟುಂಬದಲ್ಲಿ ಎಲ್ಲರೂ ರುಚಿಕರವಾದ ಅಡಿಗೆ ಸತ್ಕಾರವನ್ನು ಮಾಡುವುದರಲ್ಲಿ ನಿಪುಣರು.

ನಾಲ್ಕು ವರ್ಷಗಳ ಹಿಂದೆ ಹರ್ಭಜನ್ ಕೌರ್ ತನ್ನ 90ನೇ ವಯಸ್ಸಿನಲ್ಲಿ ಉದ್ಯಮ ಪ್ರಾರಂಭಿಸಿಯೇ ಬಿಟ್ಟರು. ಬಿಸಾನ್ ಬರ್ಫಿ ಮತ್ತು ವಿವಿಧ ರೀತಿಯ ಉಪ್ಪಿನಕಾಯಿ ತಯಾರಿಸಲು ತೊಡಗಿದರು. ಈಗ ಈ ವ್ಯಪಾರ ಚಂಡೀಗಢದಲ್ಲಿ ತುಂಬಾ ಫೇಮಸ್ ಆಗಿದೆ. ನಮ್ಮ ಮನೆಯಲ್ಲಿ ಜೀವನದುದ್ದಕ್ಕೂ ಸಿಹಿ ತಿಂಡಿಗಳು ಶರ್ಬತ್ ಗಳು ಸೇರಿದಂತೆ ವಿವಿಧ ಬಗೆ ಬಗೆಯ ಆಹಾರ ಸವಿದಿದ್ದೇವೆ. ಆದರೆ ಅಮ್ಮ ಯಾವಾಗಲೂ ತನ್ನ ಅದ್ಭುತ ಅಡುಗೆಯ ಹೊರತಾಗಿಯೂ ತೆರೆಮರೆಯಲ್ಲೇ ಇರುವುದರಲ್ಲಿ ತೃಪ್ತಿ ಹೊಂದಿದ್ದರು. ಅವರ ತಿಂಡಿ ತಿನಿಸುಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರೂ, ಅವರಿಗೆ ಔಪಚಾರಿಕವಾಗಿ ಯಾವುದೇ ಮಾನ್ಯತೆ ದೊರಕುತ್ತಿರಲಿಲ್ಲ. ಎಲ್ಲಾ ತಾಯಿಯರಂತೆ ಅವರು ನಮಗಾಗಿ ದಣಿವರಿಯಿಲ್ಲದೆ ಕೆಲಸ ಮಾಡುತ್ತಿದ್ದರು ಎಂದು ರವೀನಾ ಹೇಳುತ್ತಾರೆ.

ಮೊದಲು ಸ್ಥಳೀಯ ಮಾರುಕಟ್ಟೆಯಲ್ಲಿ ಸ್ವಂತ ಅಂಗಡಿಯನ್ನು ಸ್ಥಾಪಿಸಿ ಅಲ್ಲಿ ಕುಳಿತು ಗ್ರಾಹಕರೊಂದಿಗೆ ಬೆರೆತು ವ್ಯಾಪಾರ ಮಾಡಿದರು. 2,000 ರೂಗಳೊಂದಿಗೆ ಅಮ್ಮ ಮನೆಗೆ ಬಂದರು. ಅದು ಅವರ ಜೀವನದ ಮೊದಲ ಗಳಿಕೆ ಆಗಿತ್ತು. ಕುಟುಂಬ ಮನೆಯ ನಾಚಿಕೆ ಗೃಹಣಿ ಹೊರ ಬಂದು ವ್ಯಪಾರ ನಡೆಸಿದ್ದು ನಿಜಕ್ಕೂ ದೊಡ್ಡ ಸಾಧನೆ ಎಂದು ರವೀನಾ ನೆನಪಿಸುತ್ತಾರೆ.

ಆ ದಿನ 2,000 ರೂಗಳಿಂದ ಮನೆಗೆ ಬಂದ ಹರ್ಭಜನ್ ಕೌರ್ ರಿಗೆ ಸಂತೋಷದ ಜೊತೆಗೆ ಆತ್ಮ ವಿಶ್ವಾಸವೂ ಮೂಡಿತ್ತು. ಬರ್ಫಿ, ಚಟ್ನಿ, ವಿವಿಧ ರೀತಿಯ ಉಪ್ಪಿನ ಕಾಯಿ ಗಳನ್ನೂ ತಯಾರಿಸಿ ಮಾರುಕಟ್ಟೆಗೆ ಕೊಂಡು ಹೋಗಲು ತೀರ್ಮಾನಿಸಿದರು. ದಿನದಿಂದ ದಿನಕ್ಕೆ ಅವರಿಗೆ ಆರ್ಡರ್ ಬರಲು ತೊಡಗಿತು. ಮಗಳು ರವೀನಾ ಅವರಿಗೆ ಪ್ರೇರಣಾ ಶಕ್ತಿಯಾದರೆ, ಮೊಮ್ಮಗಳು ಉತ್ಪನ್ನಗಳನ್ನು ಬ್ರಾಂಡಿಂಗ್, ಪ್ಯಾಕೇಜಿಂಗ್ , ಟ್ಯಾಗ್ ಲೈನ್ ಮಾಡಲು ನೆರವಾದಳು.

(courtesy : the better India)

ಮನ ಮಿಡಿಯುವ ಕಥೆಯನ್ನು ವಿವರಿಸುತ್ತಾ ರವೀನಾ ಹೇಳುತ್ತಾರೆ, ಎರಡು ತಿಂಗಳ ಹಿಂದೆ ನನ್ನ ಮಗಳ ಮದುವೆಯಾಗಯಿತು ಮದುವೆಯ ಆಮಂತ್ರಣಗಳನ್ನು ತನ್ನ ನಾನಿ [ಹರ್ಭಜನ್] ಮಾಡಿದ ಸಿಹಿತಿಂಡಿಗಳೊಂದಿಗೆ ಕಳುಹಿಸಬೇಕೆಂದು ಬಯಸಿದ್ದಳು. ಅವಳು ಮಾರುಕಟ್ಟೆಯಿಂದ ಯಾವುದೇ ಸಿಹಿತಿಂಡಿಗಳನ್ನು ಬಯಸಲಿಲ್ಲ. ಮದುವೆಗೆ ಅವಳ ನಾನಿಯ ಕೈಯಿಂದ ಸಿಹಿ ತಿಂಡಿ ಮಾಡಬೇಕೆಂದು ಪಟ್ಟು ಹಿಡಿದಳು. ಅದೊಂದು ಸುಂದರ ಭಾವುಕ ಕ್ಷಣ. ಅಂದು ಅಜ್ಜಿ ತನ್ನ ಮೊಮ್ಮಗಳ ಮದುವೆಗಾಗಿ 200 ಕೆಜಿ ಬಾರ್ಫಿಯನ್ನು ತಯಾರಿಸಿದರು.

courtesy : the better India
ತಾಯಿ ಮಗಳ ಜೋಡಿ (courtesy : the better India)

LEAVE A REPLY

Please enter your comment!
Please enter your name here