ಲೇಖಕಿ ಇರಾ ತ್ರಿವೇದಿ ಒಂದು ಘಟನೆಯನ್ನು ಉಲ್ಲೇಖ ಮಾಡುತ್ತಾ, ಚೇತನ್ ಭಗತ್ ತನ್ನ ತುಟಿಯನ್ನು ಚುಂಬಿಸಲು ಮುಂದೆ ಬಂದಿದ್ದರು ಎಂದು ಹೇಳಿದ್ದಾರೆ.

ತನ್ನ ಹಸ್ತಾಕ್ಷರ ಇರುವ ಕೃತಿ ನೀಡುವುದಾಗಿ ಹೇಳಿ ಚೇತನ್ ಭಗತ್ ಆಕೆಯನ್ನು ತನ್ನ ಕೊನೆಗೆ ಕರೆದು ಕೊಂಡು ಹೋಗಿದ್ದರು ಎಂದು ಇರಾ ತ್ರಿವೇದಿ ಆರೋಪಿಸಿದ್ದಾರೆ. ಮಾತ್ರವಲ್ಲ ಸುಹೇಲ್ ಸೇಠ್ ಆಕೆಯ ಸ್ತನವನ್ನು ನೋಡಿ ನೀನು ಬ್ರಾ ತೊಡಬಾರದು ಎಂದು ಹೇಳಿರುವುದಾಗಿ ಹೇಳಿದ್ದಾರೆ.

ಮೀ ಟೂ ಅಭಿಯಾನದಿಂದ ಸೆಲೆಬ್ರಿಟಿಗಳ ಮೇಲೆ ಹಲವಾರು ಆರೋಪಗಳ ಸುರಿಮಳೆಗಳು ಸುರಿಯುತ್ತಿದೆ.

ಇದೀಗ ಲೈಂಗಿಕ ಪೀಡನೆಯ ಆರೋಪದ ಬಳಿಕ ಇರಾ ತ್ರಿವೇದಿಯವರ ಈಮೇಲ್ ಅನ್ನು ಸಾರ್ವಜನಿಕಗೊಳಿಸುವ ಮೂಲಕ ಆಕೆಯ ಆರೋಪ ಸುಳ್ಳು ಎಂದು ಚೇತನ್ ಭಗತ್ ಹೇಳಿದ್ದಾರೆ. ಯಾರು ಯಾರಿಗೆ ಮುತ್ತು ಕೊಡಲು ಬಯಸುತ್ತಾರೆ. ಆಕೆ ಮಿಸ್ ಯೂ ಕಿಸ್ಯೂ ಎಂದು ಬರೆದಿರುವ ಈಮೇಲ್ ಮೂಲಕ ತಿರುಗೇಟು ನೀಡಿದ್ದಾರೆ. ಒಂದು ವೇಳೆ ಆಕೆಗೆ ನಾನು ಲೈಂಗಿಕ ಪೀಡನೆ ನೀಡಿದ್ದರೆ ಆಕೆ ನನ್ನನ್ನು ಯಾಕೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಕರೆದರು. ಇಂತಹ ಆರೋಪಗಳನ್ನು ಮಾಡಿ ಮೀ ಟೂ ಅಭಿಯಾನವನ್ನು ದುರ್ಬಲ ಗೊಳಿಸಬೇಡಿ ಎಂದು ಚೇತನ್ ಭಗತ್ ಹೇಳಿದ್ದಾರೆ.

Leave a Reply