ಮೊಟ್ಟೆ- 2, ಹಾಲು- 1 ಕಪ್, ಮೈದ- 1 ಕಪ್, ಉಪ್ಪು – ರುಚಿಗೆ.

ಫಿಲ್ಲಿಂಗ್ ತಯಾರಿಸಲು

ಕೋಳಿ ಕೀಮ- 500 ಗ್ರಾಂ, ಟೊಮೆಟೊ- 1, ಕರಿಮೆಣಸಿನ ಹುಡಿ- 1 ಟೀ.ಸೂ.. ಮೆಣಸಿನ ಹುಡಿ- 1 ಟೀ.ಸ್ಪೂ., ಬೆಳ್ಳುಳ್ಳಿ ಹುಡಿ- 1 ಟೀ.ಸೂ., ಓರಿಗೇನೋ- ಟೀ.ಸ್ಕೂ, ಎಣ್ಣೆ- 2 ಟೀ.ಸ್ಪೂ

ತಯಾರಿಸುವ ವಿಧಾನ: ಮೊಟ್ಟೆ, ಹಾಲು, ಮೈದ, ಉಪ್ಪು ಸೇರಿಸಿ ಮಿಕ್ಸಿಯಲ್ಲಿ ಅರೆಯಿರಿ, ಫಿಲ್ಲಿಂಗ್ ತಯಾರಿಸಲು ಒಂದು ಪಾತ್ರೆ ಬಿಸಿಮಾಡಿ ಅದಕ್ಕೆ ಎಣ್ಣೆ ಹಾಕಿ ಬಿಸಿಮಾಡಿ, ಟೊಮೆಟೊ ತುಂಡುಗಳನ್ನು ಕರಿಮೆಣಸಿನ ಹುಡಿ, ಮೆಣಸಿನ ಹುಡಿ, ಬೆಳ್ಳುಳ್ಳಿ ಹುಡಿ, ಓರಿಗೇನೋ ಹಾಕಿ ಹುರಿಯಿರಿ. ಇದಕ್ಕೆ ಬೇಯಿಸಿದ ಚಿಕನ್ ಕೀಮ ಸೇರಿಸಿ ಮಿಕ್ಸ್ ಮಾಡಿ, ಮೊದಲು ತಯಾರಿಸಿಟ್ಟ ಹಿಟ್ಟು ಉಪ ಯೋಗಿಸಿ ದೋಸೆ ತಯಾರಿಸಿ. ಒಂದೊಂದರೊಳಗೂ ತಯಾರಿಸಿಟ್ಟ ಮಸಾಲೆ ಸೇರಿಸಿ, ನಾಲ್ಕು ಬದಿ ಮಡಚಿ. ಇನ್ನೊಂದು ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಹಚ್ಚಿ ಈ ಪ್ಯಾನ್ ಕೇಕ್ ಮಡಚಿದ್ದನ್ನು ಎರಡೂ ಕಡೆ ಕಾಯಿಸಿ, ಸ್ವಾದಿಷ್ಟವಾದ ಚಿಕನ್ ಕ್ರಿಪ್ಸ್ ರೆಡಿಯಾಗಿದೆ.

ಅಮಾನ, ಮಂಗಳೂರು

Leave a Reply