ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕಳೆದ ಐದು ವರ್ಷಗಳಿಂದ ತಮಗೆ ವಾಗ್ದಾನ ಮಾಡಲಾದ ಸೇತುವೆಗಾಗಿ ಕಾಯುತ್ತಿದ್ದಾರೆ. ಆದರೆ ಈ ತನಕ ಅವರಿಗೆ ಭರವಸೆ ನೀಡಲಾದ ಸೇತುವೆ ನಿರ್ಮಿಸಿ ಕೊಡಲಾಗಿಲ್ಲ. ಆದ್ದರಿಂದ ಮಧ್ಯ ಪ್ರದೇಶದ ಈ ಸರಕಾರಿ ಶಾಲೆಯ ಮಕ್ಕಳು ದಿನಾ ಹರಿಯುವ ನೀರನ್ನು ದಾಟಿ ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಇದೆ.

ತಮ್ಮ ಕೈಯಲ್ಲಿ ಚೀಲ ಮತ್ತು ಬೂಟುಗಳನ್ನು ಹಿಡಿದು ಮಧ್ಯಪ್ರದೇಶ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹರಿಯುವ ನೀರನ್ನು ದಾಟುವಾಗ ಕೆಲವೊಮ್ಮೆ ಸಮತೋಲನ ತಪ್ಪಿ ಅವರ ಚೀಲಗಳು ಪುಸ್ತಕಗಳು ಮತ್ತು ಸಮವಸ್ತ್ರಗಳು ಒದ್ದೆಯಾಗಿ ಪುನಃ ಮನೆಗೆ ಮರಳಬೇಕಾಗುತ್ತದೆ ಎಂದು ವಿದ್ಯಾರ್ಥಿಯೊಬ್ಬ ತನ್ನ ಅಳಲನ್ನು ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ತೋಡಿ ಕೊಂಡಿದ್ದಾನೆ. ಮಾತ್ರವಲ್ಲ ಕೆಲವೊಮ್ಮೆ ವಿದ್ಯಾರ್ಥಿಗಳು ಬಿದ್ದು ಗಾಯಗಳಾದದ್ದೂ ಇದೆ ಎಂದು ಮತ್ತೊಬ್ಬ ವಿದ್ಯಾರ್ಥಿ ಹೇಳಿದ್ದಾನೆ.


ಕೆಲವೊಮ್ಮೆ, ಭಾರೀ ಮಳೆಯಾಗುವ ಕಾರಣದಿಂದಾಗಿ,ನೀರು ಉಕ್ಕಿ ಹರಿಯುತ್ತದೆ. ಆಗ ವಿದ್ಯಾರ್ಥಿಗಳಿಗೆ ಮನೆಗೆ ಮರಳಲು ಸಾಧ್ಯವಾಗದೆ ರಾತ್ರಿಯಿಡೀ ಶಾಲೆಯಲ್ಲಿ ಉಳಿಯ ಬೇಕಾಗುತ್ತದೆ” ಶಿಕ್ಷಕರು ಹೇಳುತ್ತಾರೆ.

ಶಾಲೆಗೆ ಕಳುಹಿಸದೆ ಇದ್ದರೆ ಮಕ್ಕಳ ಭವಿಷ್ಯ ಹಾಳಾಗುತ್ತದೆ. ಆದ್ದರಿಂದ ಬೇರೆ ಆಯ್ಕೆ ಇಲ್ಲದಿದ್ದರೂ, ಮಕ್ಕಳನ್ನು ಈ ಅಪಾಯದ ದಾರಿಯಾಗಿ ಶಾಲೆಗೆ ಕಳುಹಿಸಬೇಕಾಗುತ್ತದೆ ಎಂದು ಪೋಷಕರು ಹೇಳುತ್ತಾರೆ.

Leave a Reply