ಚೀನಾದ ನೆರವಿನಿಂದ 2022ರಲ್ಲಿ ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸಲು ಪಾಕಿಸ್ತಾನ ಯೋಜನೆ ಹಾಕಿಕೊಂಡಿದೆಯೆಂದು ಗುರುವಾರ ಪಾಕ್ ವಾರ್ತಾ ಪ್ರಸಾರ ಖಾತೆ ಸಚಿವ ಫಹಾದ್ ಚೌದುರಿ ಬಹಿರಂಗ ಪಡಿಸಿದ್ದಾರೆ.

ಭಾರತ ಕೂಡಾ 2022ರಲ್ಲಿ ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆ ಹಾಕಿಕೊಂಡಿದೆ ಎಂದು ಸ್ವಾತಂತ್ರ್ಯ ದಿನದಂದು ಮಾಡಿದ ಬಾಷಣದಲ್ಲಿ ಪ್ರಧಾನ ಮೋದಿಯವರು ಘೋಷಿಸಿದ್ದರು.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನೇತ್ರತ್ವದಲ್ಲಿ ನಡೆದ ಸಚಿವ ಮಟ್ಟದ ಸಭೆಯಲ್ಲಿ ಈ ಯೋಜನೆಗೆ ಅಂಗೀಕಾರ ದೊರೆತಿರುವುದಾಗಿ ಬಹಿರಂಗ ಪಡಿಸಿದ ಅವರು, ಈ ಯೋಜನೆಗಾಗಿ ಚೀನಾದ ಒಂದು ಕಂಪೆನಿಯ ಜೊತೆ ಒಪ್ಪಂದ ನಡೆಸಿರುವುದಾಗಿ ಹೇಳಿದರು. ಇಮ್ರಾನ್ ಖಾನ್ ಪ್ರಧಾನಿಯಾದ ಬಳಿಕ ಚೀನಾದ ಮೊದಲ ಪ್ರವಾಸದ ಮೊದಲೇ ಈ ಘೋಷಣೆ ಹೊರಬಿದ್ದಿದೆ. ಅಮೇರಿಕಾ ರಷ್ಯಾದ ಬಳಿಕ ಮಾನವನನ್ನು ಬಾಹ್ಯಾಕಾಶ ಲೋಕಕ್ಕೆ ಕಳುಹಿಸಿದ ಚೀನಾ ಮೂರನೇಯ ದೇಶವಾಗಿದೆ.

Leave a Reply