ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೃತದೇಹ ಕೊಚ್ಚಿಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಘಟನೆಯಲ್ಲಿ ಬಾಲಕಿಯ ಪ್ರೇಮಿಯನ್ನು ಪೊಲೀಸರು ಬಂಧಿಸಿದ್ದಾರೆ. ದಿಲ್ಲಿಯ ಬಾರೊಪುಳ್ಳ ಪ್ಲೈಓವರ್ ಕೆಳಗಿನ ಕೊಳಚೆ ನೀರು ಹರಿವ ಕಾಲುವೆಯಲ್ಲಿ ಬಾಲಕಿಯ ಮೃತದೇಹ ಕಂಡುಬಂದಿತ್ತು.

ನಿಝಾಮುದ್ದೀನ್ ಏರಿಯದ ನಿಯಾಝ್ ನಗರದ ರಿಯಾಝ್ ಖಾನ್ ಎಂಬ 21 ವರ್ಷದ ಯುವಕನನ್ನುಪೊಲೀಸರು ಕೊಲೆ ಆರೋಪದಲ್ಲಿ ಬಂಧಿಸಿದ್ದಾರೆ. ಬಾಲಕಿ ಇನ್ನೊಬ್ಬ ಯುವಕನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾಳೆಂಬ ಸಂದೇಹ ಕೊಲೆಗೆ ಕಾರಣ ಎನ್ನಲಾಗಿದೆ.

ಕೊಲ್ಲಲು ಉದ್ದೇಶಿಸಿದ ಸ್ಥಳಕ್ಕೆ ಬಾಲಕಿಯನ್ನು ಕರೆಯಿಸಿಕೊಂಡು ಕಡಿದು ಕೊಲೆ ಮಾಡಿದದಾನೆ. ನಂತರ ಮೃತದೇಹವನ್ನು ಕೊಚ್ಚಿಹಾಕಿ ಬ್ಯಾಗಿನಲ್ಲಿ ತುಂಬಿ ಬಿಟ್ಟು ಹೋಗಿದ್ದಾನೆ. ಆರೋಪಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Leave a Reply