ರಾಯ್ ಪುರ್: ಈ ಕರೋನಾ ಕಾಲದಲ್ಲಿ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಕಲಿಸಲು ವಿವಿಧ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಅದೇ ಅನುಕ್ರಮದಲ್ಲಿ ಛತ್ತೀಸ್ ಗಢದ ಕೊರಿಯಾ ಜಿಲ್ಲೆಯ ಶಿಕ್ಷಕರೊಬ್ಬರು ತಮ್ಮ ಬೋಧನಾ ವಿಧಾನದಿಂದಾಗಿ ‘ಸಿನೆಮಾ ವಾಲೆ ಬಾಬು’ ಎಂದು ಪ್ರಸಿದ್ಧರಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಅಶೋಕ್ ಲೋಧಿ ಎಂಬ ಈ ಶಿಕ್ಷಕ ತನ್ನ ವಿದ್ಯಾರ್ಥಿಗಳಿಗೆ ಟಿವಿ ಮತ್ತು ಸ್ಪೀಕರ್‌ಗಳೊಂದಿಗೆ ತನ್ನ ಮೋಟಾರ್‌ಸೈಕಲ್‌ನಲ್ಲಿ ‘ಮೊಹಲ್ಲಾ’ ತರಗತಿಗಳನ್ನು ಮಾಡುತ್ತಿದ್ದಾರೆ. ಅಶೋಕ್ ಅವರ ಪ್ರಕಾರ, ‘ಇದು ವಿದ್ಯಾರ್ಥಿಗಳನ್ನು ಆಕರ್ಷಿಸಲು ಉತ್ತಮ ಮಾರ್ಗವಾಗಿದೆ. ಇದು ತುಂಬಾ ಆಕರ್ಷಣೀಯವಾಗಿದೆ. ವಿದ್ಯಾರ್ಥಿಗಳು ಅದನ್ನು ತುಂಬಾ ಆನಂದಿಸುತ್ತಿದ್ದಾರೆ.”

ಕೋವಿಡ್ -19 ಸೋಂಕು ಹೆಚ್ಚುತ್ತಿರುವ ಕಾರಣ ದೇಶಾದ್ಯಂತ ಶಾಲೆಗಳನ್ನು ಮುಚ್ಚಲಾಗಿದೆ. ಆದ್ದರಿಂದ ಹೆಚ್ಚಿನ ಶಾಲೆಗಳು ಆನ್‌ಲೈನ್‌ನಲ್ಲಿ ಪಾಠ ಮಾಡುತ್ತಿವೆ. ಆದರೆ ಬಡ ಮಕ್ಕಳು ಇದರಿಂದಾಗಿ ಶಿಕ್ಷಣದಿಂದ ದೂರವಿದ್ದಾರೆ, ಅವರಲ್ಲಿ ಅದಕ್ಕೆ ಬೇಕಾಗುವ ಮೊಬೈಲ್ ಇಲ್ಲ, ಆನ್‌ಲೈನ್ ಶಿಕ್ಷಣಕ್ಕಾಗಿ ಇಂಟರ್ನೆಟ್ ಅಥವಾ ದೂರದರ್ಶನ ಕೂಡ ಅವರು ಹೊಂದಿಲ್ಲ. ಅಂತಹ ಮಕ್ಕಳಿಗೆ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಕಲಿಸಲು ‘ಸಿನೆಮಾ ವಾಲೆ ಬಾಬು’ ಕೆಲಸ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here