ಭಾರತದಲ್ಲಿ ಎಲ್ಲೆಂದರಲ್ಲಿ ಪಾನ್ (ಎಳೆ ಅಡಿಕೆ) ಉಗುಳುವುದು, ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡುವುದು, ಮೂಗಿಗೆ ಕೈ ಹಾಕುವುದು ಹೀಗೆ ಯಾವುದೇ ಮುಲಾಜಿಲ್ಲದೆ ಮಾಡುತ್ತಾರೆ. ಆದರೆ ವಿದೇಶದಲ್ಲಿ ಈ ಬಗ್ಗೆ ಮೊದಲೇ ಎಚ್ಚರಿಕೆ ನೀಡಲಾಗುತ್ತದೆ. ಬ್ರಿಟನ್ ನ ಲೀಸೆಸ್ಟರ್ನ ಪೋಲಿಸರು ನಗರದಲ್ಲಿ ಉಗುಳುವದರ ಬಗ್ಗೆ ಎಚ್ಚರಿಕೆಯ ಬೋರ್ಡ್ ಹಾಕಿದ್ದಾರೆ.
ಬೀದಿಯಲ್ಲಿ ಪಾನ್ ಜಗಿದು ಉಗುಳುವುದು ಆರೋಗ್ಯಕ್ಕೆ ಹಾನಿಕರ ಮತ್ತು ಇದು ಸಮಾಜ ವಿರೋಧಿ ಕೆಲಸವಾಗಿದೆ ಎಂದು ಆ ಫಲಕದಲ್ಲಿ ಬರೆಯಲಾಗಿದೆ ಎಂದು ಇಂಡಿಯಾ ಟೈಮ್ಸ್ ವರದಿ ಮಾಡಿದೆ. ವಿಶೇಷವಾಗಿ ಪಾನ್ ಜಗಿದು ಉಗುಳುವ ಗುಜರಾತಿಗಳಿಗೆ 150 ಡಾಲರ್ ಅಂದ್ರೆ 13000 ರೂಪಾಯಿ ದಂಡ ವಿಧಿಸುವುದಾಗಿ ಎಚ್ಚರಿಕೆ ಸಂದೇಶ ನೀಡಲಾಗಿದೆ. ಪಾನ್ ಜಗಿದು ಉಗಿಯುವ ಕೆಟ್ಟ ಅಭ್ಯಾಸ ವಿರುವ ಗುಜರಾತಿಗಳಿಗೆ ಅವರದೇ ಭಾಷೆಯಲ್ಲಿ ಬರೆಯಲಾಗಿದೆ.
Home ಅಂತಾರಾಷ್ಟ್ರೀಯ / International ಎಲ್ಲೆಂದರಲ್ಲಿ ಪಾನ್ ಜಗಿದು ಉಗಿಯುವ ಗುಜರಾತಿಗಳಿಗೆ ಎಚ್ಚರಿಕೆ ನೀಡಿದ ಬ್ರಿಟನ್ ಪೊಲೀಸರು