ತಿರುವನಂತಪುರಂ: ಶಬರಿಮಲೆಯನ್ನು ಆದಿವಾಸಿಗಳಿಗೆ ಬಿಟ್ಟು ಕೊಡಬೇಕೆಂದು ಗೋತ್ರ ಮಹಾಸಭಾದ ನಾಯಕಿಯೊಬ್ಬರು ಹೇಳಿದ್ದಾರೆ. ಅವರು ಹೇಳುವ ಪ್ರಕಾರ ಅರಣ್ಯ ಹಕ್ಕಿನಂತೆ ಶಬರಿಮಲೆ ದೇವಸ್ಥಾನವನ್ನು ಆದಿವಾಸಿಗಳಿಗೆ ಸಿಗಬೇಕಾಗಿದೆ. ಗೋತ್ರ ಮಹಾಸಭಾ ನಾಯಕಿ ಸಿ.ಕೆ. ಜಾನು ಪರಿಶಿಷ್ಟವರ್ಗ ಪ್ರದೇಶ ಎಂದು ಘೋಷಿಸಿದರೆ ಶಬರಿ ಮಲೆ ಆದಿವಾಸಿ ಗ್ರಾಮಪಂಚಾಯತ್ ವ್ಯಾಪ್ತಿಗೊಳ ಪಡುವುದು ಎಂದಿದ್ದಾರೆ.
ಆದಿವಾಸಿ ಗ್ರಾಮ ಸಭೆ ಶಬರಿಮಲೆ ವಿಷಯದಲ್ಲಿ ತೀರ್ಮಾನ ಕೈಗೊಳ್ಳುವ ಹಕ್ಕನ್ನು ಪಡೆಯುತ್ತದೆ ಎಂದು ನಿನ್ನೆ ಮಾಧ್ಯಮಗಳಿಗೆ ತಿಳಿಸಿದ್ದರು.
ಶಬರಿಮಲೆ ಸ್ತ್ರೀಯರ ಪ್ರವೇಶದ ಕುರಿತು ಕೇರಳಾದ್ಯಂತ ಭಾರೀ ದೊಡ್ಡ ಹೋರಾಟ ನಡೆಯುತ್ತಿರುವ ವೇಳೆ ಜಾನುರಿಂದ ಇಂತಹ ಹೇಳಿಕೆ ಬಂದಿರುವುದು ಆಶ್ಚರ್ಯಕ್ಕೆ ಕಾರಣವಾಗಿದ್ದು, ಸಿಕೆ ಜಾನು ಪಂದಳಂ ರಾಜಕುಟುಂಬ ದಶಕಗಳಿಂದ ಶಬರಿಮಲೆಯನ್ನು ತಮ್ಮ ವಶದಲ್ಲಿಟ್ಟುಕೊಂಡಿದೆ. ನಿಜಕ್ಕೂ ಶಬರಿಮಲೆ ಆದಿವಾಸಿಗಳ ಕೇಂದ್ರವಾಗಿತ್ತು ಎಂದು ಅವರು ಹೇಳಿದರು.
ಪುರುಷರನ್ನು ಮತ್ತು ಮಹಿಳೆಯರನ್ನು ಎರಡಾಗಿ ವಿಭಜಿಸುವ ಸಂಸ್ಕೃತಿಯನ್ನು ಆದಿವಾಸಿಗಳು ಹೊಂದಿಲ್ಲ. ಆದಿವಾಸಿಗಳ ಎಲ್ಲ ಆಚಾರ-ಅನುಷ್ಠಾನಗಳಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಸಮಾನ ಅವಕಾಶವನ್ನು ಆದಿವಾಸಿಗಳು ಕಲ್ಪಿಸುತ್ತಾರೆ. ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ನೀಡುವುದು ಮಾತ್ರವಲ್ಲ ಅವರು ಮಹಿಳೆಯರನ್ನು ಅರ್ಚಕಿಯರನ್ನಾಗಿಯೂ ನೇಮಿಸಬೇಕು ಎಂದು ಆದಿವಾಸಿಗಳು ಬಯಸುತ್ತಾರೆ ಎಂದು ಅವರು ಹೇಳಿದರು.
ಗೋತ್ರಾ ಮಹಾಸಭೆ ಸುಪ್ರೀಂಕೋರ್ಟಿನ ತೀರ್ಪನ್ನು ಸ್ವಾಗತಿಸುತ್ತಿದೆ. ಇಂದು ಬೀದಿಗಿಳಿದು ಪ್ರತಿಭಟನೆ ನಡೆಸುವವರು ಮಹಿಳೆಯರಿಗೆ ನಿಷೇಧ ಹೇರುವ ಸಂಸ್ಕೃತಿಯನ್ನು ಬೆಂಬಲಿಸುವವರು . ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಜಾನು ಹೇಳಿದರು.