Representational Image

ಕುಕುಂಬರ್‌ ಸೂಪ್ ಬೇಕಾಗುವ ಸಾಮಗ್ರಿಗಳು:
ಈರುಳ್ಳಿ- 50 ಗ್ರಾಮ್, ಕ್ಯಾರೆಟ್- 50 ಗ್ರಾಮ್, ಕ್ಯಾಬೇಜ್- 50 ಗ್ರಾಮ್, ಬೆಣ್ಣೆ- 50 ಗ್ರಾಮ್, ಕುದಿಯುವ ನೀರು- 1 ಲೀಟರ್‌, ಕೋಳಿ- 100 ಗ್ರಾಂ, ಉಪ್ಪು – ರುಚಿಗೆ, ಬೆಳ್ಳುಳ್ಳಿ- 15 ಗ್ರಾಮ್, ಸೆಲರಿ- 10 ಗ್ರಾಮ್, ಕಾಲಿಫ್ಲವರ್- 50 ಗ್ರಾಮ್, ಪಾರ್‌ಸಲೆ- 1 ಎಸಳು, ಮುಳ್ಳುಸೌತೆ- 1.

ತಯಾರಿಸುವ ವಿಧಾನ:
* ಒಂದು ಸಾಸ್‌ ಪ್ಯಾನನ್ನು ಬಿಸಿ ಮಾಡಿ ಬೆಣ್ಣೆ, ಕತ್ತರಿಸಿದ ಬೆಳ್ಳುಳ್ಳಿ, ಈರುಳ್ಳಿ, ಸೆಲರಿ ಮುಂತಾದವುಗಳನ್ನು ಸೇರಿಸಿ ಬಾಡಿಸಿ. ಇದಕ್ಕೆ ಕ್ಯಾರೆಟ್, ಕ್ಯಾಬೇಜ್, ಕಾಲಿಫ್ಲವರ್, ಕೋಳಿ ಸೇರಿಸಿ, ಕುದಿಯುವ ನೀರು ಸೇರಿಸಿ ಪಾತ್ರೆ ಮುಚ್ಚಿ 30 ನಿಮಿಷ ಬೇಯಿಸಿ.
* ಇದನ್ನು ಒಂದು ಬಿಳಿ ಬಟ್ಟೆಯಲ್ಲಿ ಸೋಸಿ ನೀರನ್ನು ಫ್ರಿಜ್‌ನಲ್ಲಿಡಿ. (30 ನಿಮಿಷ)
* ಒಂದು ಸೂಪ್ ಬೌಲಿನಲ್ಲಿ ಬೇಯಿಸಿದ ಚಿಕನ್ ತುಂಡುಗಳನ್ನು, ಮುಳ್ಳುಸೌತೆಯ ತುಂಡುಗಳನ್ನು ಹಾಕಿ ಫ್ರಿಜ್‌ನಲ್ಲಿಟ್ಟ ತಣ್ಣಗಿನ ಸೂಪ್ ಸೇರಿಸಿ ಸವಿಯಿರಿ.

LEAVE A REPLY

Please enter your comment!
Please enter your name here