ಹೆಂಡತಿ ವೈದ್ಯರ ಬಳಿಗೆ ಗಂಡನನ್ನು ಕರೆದುಕೊಂಡು ಬಂದಳು. ಗಂಡನನ್ನು ನೋಡಿದ ವೈದ್ಯರು ಹೆಂಡತಿಯನ್ನು ಪ್ರತ್ಯೇಕವಾಗಿ ಕರೆದು ನಿಮ್ಮ ಗಂಡ ಮಾನಸಿಕ ರೋಗದಿಂದ ಬಳಲುತ್ತಿದ್ದಾರೆ. ನೀವು ಕೆಲವು ಮುನ್ನೆಚ್ಚರಿಕೆಯನ್ನು ಪಾಲಿಸದಿದ್ದರೆ ನಿಮ್ಮ ಗಂಡ ಸಾಯುತ್ತಾರೆ. ಪ್ರತಿದಿನ ಬೆಳಿಗ್ಗೆ ಆರೋಗ್ಯಭರಿತ ಆಹಾರ ನೀಡಿ, ರಾತ್ರಿಗೆ ವಿಶೇಷ ಆಹಾರ ತಯಾರಿಸಿ ಕೊಟ್ಟು ಸಂತೋಷ ಪಡಿಸಿ. ಯಾವುದೇ ಸಮಸ್ಯೆಯನ್ನು ಅವರ ಮುಂದೆ ಪ್ರಸ್ತಾಪಿಸಬೇಡಿ. ನೀವು ಅವರಿಗೆ ಪ್ರೀತಿ ಕೊಡಿ. ಹಾಗೆ ನೀವು ಮಾಡಿದರೆ ನಿಮ್ಮ ಗಂಡ ಒಂದು ವರ್ಷದಲ್ಲಿ ಗುಣಮುಖವಾಗುತ್ತಾರೆ.
ಮನೆಗೆ ಹಿಂದಿರುವಾಗ ಗಂಡ ಹೆಂಡತಿಯಲ್ಲಿ ಡಾಕ್ಟರ್ ಏನು ಹೇಳಿದರು ಎಂದು ವಿಚಾರಿಸುತ್ತಾರೆ.
ಆಗ ಹೆಂಡತಿ, ನೀವು ಬೇಗ ಸಾಯುತ್ತೀರಂತೆ!!!
ಸೌಂದರ್ಯ, ಮಂಗಳೂರು