ಹೊಸದಿಲ್ಲಿ: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಿಗೆ ಅನುಕೂಲಕರವಾಗಿ ಹೇಳಿಕೆ ಬದಲಾಯಿಸುವ ದೂರುಗಾರ್ತಿಯನ್ನು ಶಿಕ್ಷಸಬೇಕು ಎಂದು ಸುಪ್ರೀಂಕೋರ್ಟು ಹೇಳಿದೆ. ದೂರುದಾರೆ ಹೇಳಿಕೆ ಬದಲಾಯಿಸಿದರೆ ಮೆಡಿಕಲ್ ರಿಪೋರ್ಟ್ ಸಹಿತ ಇತರ ಪುರಾವೆಗಳ ಆಧಾರದಲ್ಲಿ ಆರೋಪಿಗಳಿಗೆ ಶಿಕ್ಷೆ ನೀಡಬೇಕು ಎಂದು ಸುಪ್ರೀಂಕೋರ್ಟು ಆದೇಶಿಸಿದೆ.ಜಸ್ಟಿಸ್ ರಂಜನ್ ಗೊಗೊಯ್ ಅಧ್ಯಕ್ಷತೆಯ ಪೀಠ ಈ ಆದೇಶ ಹೊರಡಿಸಿದೆ.
ಅತ್ಯಾಚಾರ ಪ್ರಕರಣದಲ್ಲಿ ಹೆಚ್ಚಿನ ಪ್ರಭಾವ ಬೀಳುವಂತಹ ತೀರ್ಪನ್ನು ಸುಪ್ರೀಂಕೋರ್ಟು ನೀಡಿದೆ. ದೂರದಾರೆ ಹೇಳಿಕೆ ಬದಲಾಯಿಸಿದರೂ ಪ್ರಕರಣವನ್ನು ಕೊನೆಗೊಳಿಸಬಾರದು. ಕ್ರಿಮಿನಲ್ ವಿಚಾರಣೆಗಳುಸತ್ಯವನ್ನು ಕಂಡು ಹುಡುಕುವ ಶೋಧನೆಗಳಾಗಿವೆ ಎಂದು ಕೋರ್ಟು ತಿಳಿಸಿದೆ.
ಹೇಳಿಕೆ ಬದಲಾಯಿಸುವುದು ತೀರಾ ಗಂಭೀರ ವಿಚಾರವಾಗಿದ್ದು ಪ್ರಕರಣವನ್ನು ಬುಡಮೇಲು ಗೊಳಿಸುವುದು ಆಗಿರುತ್ತದೆ.ಆದ್ದರಿಂದ ಈ ವೇಳೆ ಕೋರ್ಟಿಗೆ ಮೂಕವಾಗಿರಲು ಸಾಧ್ಯವಿಲ್ಲ. ಸತ್ಯ ಹೊರ ತರಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂದು ಪೀಠ ಹೇಳಿತು. ಅತ್ಯಾಚಾರ ಆರೋಪಿ ಹೇಳಿಕೆ ಬದಲಾಯಿಸಿದರೂ ಆರೋಪಿಯನ್ನುಶಿಕ್ಷಿಸಿದ ಗುಜರಾತ್ ಹೈಕೋರ್ಟಿನ ತೀರ್ಪನ್ನು ಸುಪ್ರೀಂಕೋರ್ಟು ಎತ್ತಿಹಿಡಿಯಿತು.
ಇದೇ ವೇಳೆ 2004 ರಲ್ಲಿ ಬಾಲಕಿಗೆ ಒಂಬತ್ತು ವರ್ಷವಾಗಿದ್ದ ಘಟನೆ ನಡೆದಿದ್ದರೂ ಈಗಲೂ ಕುಟುಂಬ ಭಯದಿಂದ ಬದುಕುತ್ತಿದೆ. ಆದ್ದರಿಂದ ದೂರುದಾರೆಯ ವಿರುದ್ಧ ಕೇಸು ದಾಖಲಿಸಿಕೊಳ್ಳುವುದಿಲ್ಲ ಎಂದು ಸುಪ್ರೀಂಕೋರ್ಟು ತಿಳಿಸಿತು.