ಈ ಬಾರಿಯ ಮಹಾರಾಷ್ಟ್ರ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಪಕ್ಷವು ಸಂಪೂರ್ಣ ಸೋಲನುಭವಿಸಿದ್ದು, ಇದೀಗ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಅಶೋಕ್‌ ಚವಾಣ್ ರಾಜೀನಾಮೆ ಸಲ್ಲಿಸಿದ ಬೆಳವಣಿಗೆ ನಡೆದಿದೆ.

ಎಐಐಗೆ ಮಾತನಾಡಿದ ಚವಾಣ್, ” ನಾವು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ರಾಜೀನಾಮೆ ಸಲ್ಲಿಸ ಬೇಕಾಗಿದೆ. ಹಾಗೆಯೆ ನಾನೂ ರಾಜಿನಾಮೆ ಸಲ್ಲಿಸಿದ್ದೇನೆ. ಇದರಲ್ಲಿ ಬದಲಾವಣೆ ಮಾಡುವ ಸಂಪೂರ್ಣ ಅಧಿಕಾರ ಕಾಂಗ್ರೆಸ್ ಅಧ್ಯಕ್ಷರಿಗೆ ಇದೆ. ಅವರು ನಮ್ಮ ಪಕ್ಷದ ಅಧ್ಯಕ್ಷರಾಗಿದ್ದಾರೆ. ಪಕ್ಷದ ಸೋಲಿಗೆ ಅವರೊಬ್ಬರನ್ನು ಹೇಳುವುದು ಸರಿಯಲ್ಲ, ಈ ಸೋಲಿಗೆ ನಾವೆಲ್ಲರೂ ಸಾಮೂಹಿಕವಾಗಿ ಜವಾಬ್ದಾರರಾಗಿದ್ದೇವೆ. ಎಲ್ಲಾ ರಾಜ್ಯದ ಕಾಂಗ್ರೆಸ್ ಮುಖ್ಯ ಮಂತ್ರಿಗಳೂ ಹೊಣೆಗಾರರಾಗಿದ್ದಾರೆ. ಆದ್ದರಿಂದ ಈ ಸೋಲಿಗೆ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಎನ್ಸಿಪಿ ಮೈತ್ರಿ ಮಾಡಿದ್ದರೂ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಕೇವಲ ಒಂದು ಸೀಟು ಗೆಲ್ಲುವಲ್ಲಿ ಸಫಲವಾಗಿದೆ. ಸ್ವತಃ ಅಶೋಕ್‌ ಚವಾಣ್‌ , ನಾಂದೇಡ್‌ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಸೋತಿದ್ದಾರೆ.

Leave a Reply