ಹೊಸದಿಲ್ಲಿ: ಅಲಹಾಬಾದ್‍ನ ಹೆಸರನ್ನು ಬದಲಾಯಿಸಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಯಾಗ್‍ರಾಜ್ ಇಡಲು ಮುಂದಾಗಿರುವುದನ್ನು ಕಾಂಗ್ರೆಸ್ ಬಲವಾಗಿ ವಿರೋಧಿಸಿದೆ. ಸ್ವಾತಂತ್ರ್ಯ ಹೋರಾಟ ಕಾಲದಲ್ಲಿಯೂ ಅಲಾಹಾಬಾದ್ ದಾಖಲೆಗೆ ಸೇರಿದ ಐತಿಹಾಸಿಕ ಮಹತ್ವವಿರುವ ಸ್ಥಳವಾಗಿದೆ. ಈ ಹೆಸರನ್ನು ಬದಲಾಯಿಸುವ ಮೂಲಕ ಇತಿಹಾಸವನ್ನು ತಿರುಚಲು ಯತ್ನಿಸಲಾಗುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಓಂಕಾರ್ ಸಿಂಗ್ ಹೇಳಿದರು.

ಕುಂಭ ಮೇಳ ನಡೆಯುವ ಸ್ಥಳ ಈಗಲೂ ಪ್ರಯೋಗ್‍ರಾಜ್ ಎಂದೇ ಅರಿಯಲ್ಪಡುತ್ತಿದೆ. ಇದನ್ನು ಬದಲಾಯಿಸಲು ಸರಕಾರ ಬಯಸುವುದಾದರೆ ಆ ನಗರವನ್ನು ವಿಭಜಿಸಬೇಕು. ಆ ನಗರದ ಹೆಸರನ್ನು ಬದಲಾಯಿಸುವುದಲ್ಲ ಎಂದು ಅವರು ಹೇಳಿದರು.

ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆದ ಕಾಲದಲ್ಲಿ ಅಲಾಹಾಬಾದ್ ಒಂದು ಪ್ರೇರಣೆಯಾದ ನಗರವಾಗಿತ್ತು. 1888ರಲ್ಲಿ ಮತ್ತು 1910 ರಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ರೂಪು ನೀಡಿದ ಕಾಂಗ್ರೆಸ್‍ನ ಮಹಾಧಿವೇಶನ ಅಲ್ಲಿ ನಡೆದಿತ್ತು. ದೇಶದ ಪ್ರಥಮ ಪ್ರಧಾನಿ ಅಲಹಾಬಾದ್‍ನವರು. ಅಲಹಾಬಾದ್‍ನ ಹೆಸರು ಬದಲಾಯಿಸುವುದಿದ್ದರೆ ವಿಶ್ವವಿದ್ಯಾನಿಲಯದ ಹೆಸರನ್ನು ಕೂಡಾ ಬದಲಾಯಿಸಲಿ ಎಂದು ಅವರು ಹೇಳಿದರು.

ಇದೇ ವೇಳೇ ಬಿಜೆಪಿ ಯೋಗಿ ಸರಕಾರದ ನಿರ್ಧಾರವನ್ನು ಬೊಗಸೆಯೊಡ್ಡಿ ಸ್ವೀಕರಿಸಿದೆ. ರಾಜ್ಯದ ಕೋಟ್ಯಂತರ ಜನರ ಭಾವನೆಯನ್ನು ಪರಿಗಣಿಸಿ ನಗರಕ್ಕೆ ಹೊಸ ಹೆಸರು ನೀಡುವ ಸರಕಾರದ ನಿರ್ಧಾರವನ್ನು ಬಿಜೆಪಿ ಅಭಿನಂದಿಸಿದೆ.

Leave a Reply