ನವದೆಹಲಿ: ಹದಿನೇಳನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(ಎನ್‌ಡಿಎ) ಪ್ರಚಂಡ ಬಹುಮತ ಪಡೆದಿದೆ.

ಏತನ್ಮಧ್ಯೆ, ರಾಹುಲ್ ಗಾಂಧಿ ನಾಯಕತ್ವದ ಕಾಂಗ್ರೆಸ್ ಪಕ್ಷ ಒರಿಸ್ಸಾ, ಗುಜರಾತ್ , ಉತ್ತರಖಂಡ, ಅರುಣಾಚಲ, ಆಂಧ್ರಪ್ರದೇಶ ,ಕಾಶ್ಮೀರ, ನಾಗಾಲ್ಯಾಂಡ್, ತ್ರಿಪುರಾ, ಸಿಕ್ಕಿಮ್ ಹರ್ಯಾಣ , ಮಣಿಪುರ, ಮಿಜೋರಾಂ, ಹಿಮಾಚಲ, ರಾಜಾಸ್ಥಾನ  ಸೇರಿದಂತೆ ಸುಮಾರು ಹದಿನೇಳು ರಾಜ್ಯಗಳಲ್ಲಿ ಸೊನ್ನೆ ಸುತ್ತಿರುವುದು ಆ ಪಕ್ಷದ ರಾಜಕೀಯ ಚರಿತ್ರೆಯಲ್ಲಿ ಅತ್ಯಂತ ಕರಾಳ ಅಧ್ಯಾಯವೆನಿಸಿದೆ. ಉ.ಪ ಹಾಗೂ ಮಧ್ಯಭಾರತದ ಹತ್ತು ಪ್ರಮುಖ ರಾಜ್ಯಗಳಲ್ಲಂತೂ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳು ಮಾಡಿರುವ ಸಾಧನೆ ಬಹಳ ದೊಡ್ಡದು. ಈ ಎಲ್ಲ ರಾಜ್ಯಗಳೂ ಸೇರಿ 284 ಲೋಕಸಭಾ ಕ್ಷೇತ್ರಗಳಿದ್ದು, ಅವುಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 216 ಸ್ಥಾನಗಳನ್ನು ಪಡೆದುಕೊಂಡಿರುವುದು ದೇಶದ ರಾಜಕೀಯ ಇತಿಹಾಸದಲ್ಲಿನ ಪ್ರಮುಖ ಮೈಲುಗಲ್ಲೆನಿಸಿದೆ.

ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ ಘಡಗಳಲ್ಲಿ ಕಾಂಗ್ರೆಸ್ ಸ್ವಂತ ಬಲದ ಸರ್ಕಾರ ಹೊಂದಿದ್ದರೂ ಈ ರಾಜ್ಯಗಳಲ್ಲಿನ 65 ಸ್ಥಾನಗಳ ಪೈಕಿ ಕೇವಲ ಮೂರರಲ್ಲಿ ಮಾತ್ರ ಪಕ್ಷ ಗೆಲುವು ಸಾಧಿಸಿರುವುದು ಆದರೆ ಅವನತಿಗೆ ಕೈಗನ್ನಡಿ ಓಡಿದಂತಿದೆ.

ಕಳೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮೋದಿ-ಶಾ ಜೋಡಿಗೆ ಏಕಾಂಗಿಯಾಗಿ ತೀವ್ರ ಪೈಪೋಟಿ ಒಡ್ಡಿದ ರಾಹುಲ್ ಗಾಂಧಿ ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಈ ರಾಜ್ಯದ 26 ಕ್ಷೇತ್ರಗಳ ಪೈಕಿ ಒಂದರಲ್ಲಿಯೂ ಗೆಲ್ಲಲಾರದೆ ಹೋದ ಕಾರಣ ಅವರ ನಾಯಕತ್ವ ಹಲವು ಪ್ರಶ್ನೆಗಳ ಸುಳಿಗೆ ಸಿಲುಕಿದೆ. 48 ಸದಸ್ಯಬಲದ ಮಹಾರಾಷ್ಟ್ರದಲ್ಲಿಯಾದರೂ ಅಷ್ಟೇ, ಬಿಜೆಪಿ 23 ಹಾಗೂ ಅದರ ಮಿತ್ರಪಕ್ಷ ಶಿವಸೇನೆ 18 ಸ್ಥಾನ ಗೆದ್ದಿದ್ದು, ಕಾಂಗ್ರೆಸ್ (5) ಮತ್ತು ಅದರ ಮಿತ್ರಪಕ್ಷ ಎನ್‌ಸಿಪಿ (2) ಸೇರಿ ಕೇವಲ 7 ಸ್ಥಾನಗಳಲ್ಲಿ ಜಯಗಳಿಸಿ ತೀವ್ರ ಮುಖಭಂಗ ಅನುಭವಿಸಿರುವುದು ಗಮನಾರ್ಹ. ಮತ ಎಣಿಕೆಯ ಹಂತದಲ್ಲಿ ಕಾಂಗ್ರೆಸ್ ಪಕ್ಷವು ತಮಿಳುನಾಡು(8) ಮತ್ತು ಪಶ್ಚಿಮ ಬಂಗಾಳದಲ್ಲಿ (2) ಸೀಟುಗಳನ್ನು ಗೆದ್ದು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.

Leave a Reply