ಬೀಜಿಂಗ್ – ಕೊರೋನಾದ ವಿರುದ್ಧ ಜಾಗತಿಕ ಹೋರಾಟ ತೀವ್ರವಾಗಿ ಇರುವಂತೆಯೇ ಕೊರೋನಾದ ಅಪಾಯಕಾರಿ ರೂಪಗಳು ಕೂಡ ದಿನೇದಿನೇ ಪತ್ತೆಯಾಗುತ್ತಾ ಆತಂಕ ಮೂಡಿಸುತ್ತಿದೆ. ಇಂಥದ್ದೊಂದು ಸಂಶೋಧನಾ ವರದಿ ಬೀಜಿಂಗ್ ನಿಂದ ಹೊರಬಿದ್ದಿದೆ. ಕೊರೋನಾ ರೋಗದಿಂದ ಗುಣಮುಖರಾದ ಪುರುಷ ವೀರ್ಯದಲ್ಲಿ ಕೊರೋನಾ ವೈರಸ್ ಜೀವಂತವಿರುತ್ತದೆ ಎಂಬುದು ಈ ಹೊಸ ಸಂಶೋಧನೆಯ ಸಾರಾಂಶ.

ಲೈಂಗಿಕ ಸಂಬಂಧದ ಮೂಲಕ ಈ ರೋಗ ಹರಡುವುದಕ್ಕೆ ಅವಕಾಶ ಇದೆ ಎಂಬುದನ್ನು ಈ ಸಂಶೋಧನೆ ಬಹಿರಂಗಪಡಿಸುತ್ತದೆ ಎಂದು ಚೀನಾ ಸಂಶೋಧನೆಯನ್ನು ಉಲ್ಲೇಖಿಸಿ ಅಂತಾರಾಷ್ಟ್ರೀಯ ಮಾಧ್ಯಮವಾದ ಸಿಎನ್ಎನ್ ವರದಿ ಮಾಡಿದೆ.

ಚೀನಾದ ವುಹಾನಿನ ಶಾಂಕ್ ಮುನ್ಸಿಪಲ್ ಆಸ್ಪತ್ರೆಯಲ್ಲಿ ಕೊರೋನಾ ಚಿಕಿತ್ಸೆಯಲ್ಲಿದ್ದ 38 ಪುರುಷರ ಪೈಕಿ ಒಂದು ಗುಂಪಿನ ಮೇಲೆ ಸಂಶೋಧಕರು ನಡೆಸಿದ ಸಂಶೋಧನೆಯಲ್ಲಿ
ವೀರ್ಯದಲ್ಲಿ ಕೊರೋನಾ ವೈರಸ್ ಜೀವಂತವಿರುವುದು ದೃಢಪಟ್ಟಿದೆ. ಇವರಲ್ಲಿ 16 ಶೇಕಡಾ ಕೊರೋನಾ ವೈರಸ್ ಇರುವುದನ್ನು ಈ ಸಂಶೋಧಕರು ಪತ್ತೆಹಚ್ಚಿದ್ದಾರೆ ಎಂದು ಜಾಮ್ ನೆಟ್ವರ್ಕ್ ಓಪನ್ ಜರ್ನಲ್ ಪ್ರಕಟಿಸಿದ ವರದಿಯಲ್ಲಿ ಹೇಳಲಾಗಿದೆ.

ಸಂಶೋಧನೆಗೆ ಒಳಪಡಿಸಿದವರಲ್ಲಿ ಕಾಲು ಭಾಗದಷ್ಟು ಮಂದಿ ತೀವ್ರಗತಿಯಲ್ಲಿ ಕೊರೋನಾ ಬಾಧಿತರಾದವರಾಗಿದ್ದಾರೆ ಎಂದು ವರದಿ ತಿಳಿಸಿದೆ. ಆದರೆ ಈ ಮೂಲಕ ವೈರಸ್ ಹರಡುತ್ತದೋ ಅನ್ನುವುದು ಇನ್ನೂ ದೃಢವಾಗಿಲ್ಲ.

ಇದಲ್ಲದೇ, ಎಬೋಲಾ ಮತ್ತು ಸಿಕ್ಕ್ ವೈರಸ್ ಸೋಂಕಿತರಾಗಿ ಗುಣ ಮುಕ್ತರಾದ ಪುರುಷರ ವೀರ್ಯದಲ್ಲಿ ತಿಂಗಳ ಬಳಿಕವೂ ವೈರಸ್ ಜೀವಂತವಿದ್ದುದು ಪತ್ತೆಯಾಗಿತ್ತು.

LEAVE A REPLY

Please enter your comment!
Please enter your name here