ಫಲ್ವಲ್: ಕೊಲ್ಕತದ ದಂಪತಿ ಓರ್ವ ಹುಡುಗಿಗೆ ಕೆಲಸ ಕೊಡಿಸುವುದಾಗಿ ಸುಳ್ಳು ಹೇಳಿ 65 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಖರೀದಿಸಿದ ವ್ಯಕ್ತಿಯಿಂದ ತಪ್ಪಿಸಿಕೊಂಡ ಹುಡುಗಿ ಪೊಲೀಸ್ ಠಾಣೆಗೆ ಬಂದು ತನ್ನ ಕತೆ ವಿವಿರಿಸಿದ್ದಾಳೆ. ನಂತರ ದಂಪತಿಯನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಬಾಲಕಿಯನ್ನು ಪೊಲೀಸರು ಕೊಲ್ಕತಾಕ್ಕೆ ವಾಪಸು ಕಳುಹಿಸಿ ಕೊಟ್ಟಿದ್ದಾರೆ.
ಪೊಲೀಸರು ಘಟನೆಯನ್ನು ಹೀಗೆ ವಿವರಿಸಿದ್ದಾರೆ. ಕೊಲ್ಕತದ ಸರೀನಾ ಖಾತೂನ್ ಎಂಬ ಹುಡುಗಿ ತನ್ನನ್ನು ಮಾರಲಾದ ಘಟನೆಯನ್ನು ಪೊಲೀಸರಿಗೆ ತಿಳಿಸಿದ್ದಾಳೆ. ಕೊಲ್ಕತಾದಲ್ಲಿ ಮನೆಯ ಹತ್ತಿರದ ಅನ್ನಾ ಎಂಬ ಮಹಿಳೆಯು ಅವಳ ಗೆಳೆತನ ಮಾಡಿದ್ದು ತನ್ನ ಗಂಡ ಹೇಮರಾಜನೊಂದಿಗೆ ಸೇರಿ ಹುಡುಗಿಗೆ ಕೆಲಸ ಕೊಡಿಸುವುದಾಗಿ ಹೇಳಿ ಹರ್ಯಾಣದ ಫಲ್ವಲ್ ಗೆ ಕರೆತಂದು ಮಾರಿದ್ದರು. ಹುಡುಗಿಯನ್ನು ಕರೆ ತಂದ ಬಳಿಕ ತಮ್ಮ ಫಲ್ವಲ್ನ ಮನೆಯಲ್ಲಿ ಹತ್ತು ದಿವಸಗಳ ಇರಿಸಿ ಕೊಂಡಿದ್ದ ದಂಪತಿ ಮಥುರಾ ಜಿಲ್ಲೆಯ ಒಬ್ಬ ವ್ಯಕ್ತಿಗೆ ಅಕ್ಟೋಬರ್ ಐದರಂದು ಅರುವತ್ತೈದು ಸಾವಿರ ರೂಪಾಯಿಯೊಂದಿಗೆ ವ್ಯವಹಾರ ಕುದುರಿಸಿದ್ದರು. ಆದರೆ ಹುಡುಗಿ ಅತ್ಯಾಚಾರವಾಗಲಿ, ಕಿರುಕುಳ ನೀಡಿದ್ದಾಗಲಿ ತಮಗೆ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ದೂರು ದಾಖಲಿಸಿಕೊಂಡು ದಂಪತಿಯನ್ನು ಬಂಧಿಸಿದ್ದಾರೆ. ಹುಡುಗಿಯನ್ನು ಖರೀದಿಸಿದ ವ್ಯಕ್ತಿಯ ಪತ್ತೆಗೆ ಬಲೆ ಬೀಸಿದ್ದಾರೆ. ಹುಡುಗಿಯನ್ನು ಅವಳ ಹುಟ್ಟೂರ್ ಕೊಲ್ಕತಾಕ್ಕೆ ಕಳುಹಿಸಿದ್ದಾರೆ.