ಭೋಪಾಲ್ ಬಾಬಾ ಅರಣ್ಯ ವ್ಯಾಪ್ತಿಯಲ್ಲಿ ಸುಮಾರು 15 ಮಂಗಗಳು ನೀರು ಸಿಗದೇ ಪ್ರಾಣ ತೆತ್ತ ಘಟನೆ ವರದಿಯಾಗಿತ್ತು. ಹತ್ತಿರದ ನೀರಿನ ಮೂಲವನ್ನು ಮಂಗದ ಗುಂಪೊಂದು ನಿಯಂತ್ರಿಸುತ್ತಿದ್ದು, ಈ ಗುಂಪಿನ ಮಂಗಗಳಿಗೆ ನೀರು ಕುಡಿಯಲು ಅನುಮತಿ ಕೊಡದ ಕಾರಣ 15 ಮಂಗಗಳು ಜೀವ ಬಿಟ್ಟಿತ್ತು. ದೇಶದಾದ್ಯಂತ ನೀರಿನ ಕೊರತೆಯಿಂದ ಮಂಗಗಳಿಗೆ ಮತ್ತು ಇತರ ಪ್ರಾಣಿ ಸಂಕುಲಕ್ಕೆ ಅಪಾಯ ಬಂದೊದಗಿದೆ.
ಈ ಮಧ್ಯೆ ಹಸುವೊಂದು ಬಾಯಾರಿದ ಮಂಗಗಳಿಗೆ ಹಾಲು ನೀಡಿದ ಅಸಾಮಾನ್ಯ ಘಟನೆ ನಡೆದಿದೆ.ರಾಜಸ್ತಾನದ ಸಿರೋಹಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಇದೀಗ ಈ ಹಸು ಎಲ್ಲರ ಗಮನ ಸೆಳೆದಿದೆ. ಬಹಳ ವರ್ಷಗಳಿಂದ ರೋಹಿಡಾದ ಜಬೇಶ್ವರ ಮಹಾದೇವ್ ದೇವಾಲಯದಲ್ಲಿಯೇ ವಾಸಿಸುತ್ತಿರುವ ಈ ಹಸು ತನ್ನ ಮರಿಗಳನ್ನು ಸಾಕುವಂತೆ ಈ ಮಂಗಗಳಿಗೆ ಹಾಲು ನೀಡಿ ತಾಯಿಯ ಪ್ರೀತಿ ತೋರಿಸಿದೆ. ನೀರಿಗಾಗಿ ಸ್ವಾರ್ಥಕ್ಕಾಗಿ ಜಗಳಾಡುವ ಮನುಷ್ಯರು ಈ ಮೂಕ ಪ್ರಾಣಿಗಳಿಂದ ಬಹಳಷ್ಟು ಕಲಿಯಬೇಕಾಗಿದೆ.

Leave a Reply