ಬೇಕಾಗುವ ಸಾಮಗ್ರಿಗಳು

ಮಶ್ರೂಮ್ (ಅಣಬೆ)- 250 ಗ್ರಾಂ, ಫ್ರೆಶ್ ಕ್ರೀಮ್- 1 ಕಪ್, ಚಿಕನ್ ಸ್ಟಾಕ್ – 2 ಕಪ್, ಮೈದ ಮೂರು ಟೀ, ಸ್ಕೂ.. ಬೆಳ್ಳುಳ್ಳಿ – 1 ಎಸಳು, ಟೊಮೆಟೊ 1 ಕಪ್, ಬೆಣ್ಣೆ- 4 ಟೀ.ಸ್ಪೂ, ಉಪ್ಪು- ರುಚಿಗೆ.

ತಯಾರಿಸುವ ವಿಧಾನ:

ಮೊದಲು ಚಿಕನ್ ಸ್ಟಾಕ್ ತಯಾರಿಸಿಕೊಳ್ಳಿ. ಇದಕ್ಕಾಗಿ ಎರಡು ಕಪ್ ನೀರಿಗೆ 1 ಕಪ್ ಚಿಕನ್ ಪೀಸ್ ಹಾಕಿ. ಟೀಸ್ಪೂ, ಕರಿಮೆಣಸಿನ ಹುಡಿ, ಉಪ್ಪು ಸೇರಿಸಿ ಬೇಯಿಸಬೇಕು. ಒಂದು ಪ್ಯಾನ್‌ನಲ್ಲಿ ಬೆಣ್ಣೆ ಬಿಸಿ ಮಾಡಿ ಅದಕ್ಕೆ ಜಜ್ಜಿದ ಬೆಳ್ಳುಳ್ಳಿ ಟೊಮೆಟೊ ಸೇರಿಸಿ ಚೆನ್ನಾಗಿ ಬಾಡಿಸಿ. ಈಗ ಮಶ್ರೂಮ್ ಸೇರಿಸಿ ಪುನಃ ಹುರಿಯಿರಿ. ಇದಕ್ಕೆ ಮೈದ ಸೇರಿಸಿ, ಕರಿಮೆಣಸಿನ ಹುಡಿ ಹಾಕಿ ಮಿಕ್ಸ್ ಮಾಡಿ, ಚಿಕನ್ ಸ್ಟಾಕ್ ಹಾಕಿ ಸಾಧಾರಣ ಮಧ್ಯಮ ಉರಿಯಲ್ಲಿ ಹತ್ತು ನಿಮಿಷ ಬೇಯಿಸಿ. ಮಶ್‌ರೂಮ್ ಚೆನ್ನಾಗಿ ಬೆಂದ ಬಳಿಕ ಫ್ರೆಶ್ ಕ್ರೀಮ್ ಸೇರಿಸಿ. ತುಂಬಾ ಹೊತ್ತು ಕುದಿಸಬೇಡಿ. ಬಿಸಿಯಾದರೆ ಸಾಕು. ಅಗತ್ಯಕ್ಕೆ ತಕ್ಕಷ್ಟು ಉಪ್ಪು, ಕರಿಮೆಣಸಿನ ಹುಡಿ ಸೇರಿಸಿ ಬಿಸಿಯಾಗಿರುವಾಗಲೇ ಬಡಿಸಿ.

Leave a Reply