ಮುಂಬೈ: ಬಿಗ್‍ಬಾಸ್ ರಿಯಾಲಿಟಿ ಶೋವನ್ನು ಬಿಟ್ಟು ಹೊರ ನಡೆಯಬೇಕಾದರೆ ಮಾಜಿ ಇಂಡಿಯನ್ ಕ್ರಿಕೆಟರ್ ಶ್ರೀಶಾಂತ್ 50 ಲಕ್ಷ ರೂಪಾಯಿ ದಂಡ ತೆರಬೇಕಾಗುತ್ತದೆ.

ಮಂಗಳವಾರ ನಡೆದ ಎಪಿಸೊಡಿನಲ್ಲಿ ಶ್ರೀಶಾಂತ್‍ಗೆ ಇನ್ನೋರ್ವ ಕಂಟೆಸ್ಟೆಂಟ್ ಸೊಮಿ ಖಾನ್‍ರೊಂದಿಗೆ ಮಾತಿಗೆ ಮಾತು ಬೆಳೆದಿದ್ದು ತಾನು ರಿಯಾಲಿಟಿ ಶೋದಿಂದ ಹೊರ ನಡೆಯುವೆ ಎಂದು ಶ್ರೀಶಾಂತ್ ಹೇಳಿದ್ದರು.

ಮಧ್ಯದಲ್ಲಿ ಶೋನಿಂದ ಹೊರ ಹೋಗಬೇಕಾದರೆ ಕಲರ್ಸ್ ಟಿವಿಗೆ ಇಷ್ಟು ಮೊತ್ತ ಕೊಡಬೇಕೆಂದು ಒಪ್ಪಂದದಲ್ಲಿದೆ. ಈ ಹಿಂದೆ ಶ್ರೀಶಾಂತ್ ಜಲಕ್ ದಿಖಾ ಜೊಎನ್ನುವ ಶೋವನ್ನು ಕೂಡ ಶ್ರೀಶಾಂತ್ ಅರ್ಧದಲ್ಲಿ ಬಿಟ್ಟು ಬಂದಿದ್ದರು.

Leave a Reply